ನವದೆಹಲಿ: ಜನವರಿ 1ರಿಂದ ಜೂನಿಯರ್ ಮಟ್ಟದ ಸರ್ಕಾರಿ ಉದ್ಯೋಗಿಗಳು ಸಂದರ್ಶನಗಳನ್ನು ನೀಡುವ ಅಗತ್ಯವಿಲ್ಲ. ಉದ್ಯೋಗಿಗಳ ನಿಯೋಜನೆಯಲ್ಲಿ ಪಾರದರ್ಶಕತೆಯನ್ನು ಸ್ಥಾಪಿಸಲು ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸಲು ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ.
’ಸಂದರ್ಶನಗಳಿಂದ ದೂರವಿರಲು ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಸರ್ಕಾರ ಮುಗಿಸಿದೆ. ಕೇಂದ್ರ ಸರ್ಕಾರದ ಗ್ರೂಪ್ ಡಿ, ಗ್ರೂಪ್ ಸಿ, ಗ್ರೂಪ್ ಬಿಯ ನಾನ್ ಗೆಝಟೈಸ್ ಪೋಸ್ಟ್ಗಳಿಗೆ ಸಂದರ್ಶನದ ಅಗತ್ಯವಿಲ್ಲ. ಇದು ಜನವರಿ 1, 2016ರಿಂದ ಜಾರಿಗೆ ಬರಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದಾಗಿ ಉದ್ಯೋಗ ಆಕಾಂಕ್ಷಿಗಳು ಸಂದರ್ಶನ ಎದುರಿಸುವ ಸಂಕಷ್ಟದಿಂದ ಪಾರಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.