ಚೆನ್ನೈ: ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರ ಪುರುಷತ್ವ ಹರಣ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ಸಲಹೆ ನೀಡಿದೆ.
ದೇಶದ ವಿವಿಧ ಭಾಗದಲ್ಲಿ ಎಳೆಯ ಮಕ್ಕಳ ಮೇಲೆ ನಡೆಯುತ್ತಿರುವ ಅನಾಗರಿಕ ದೌರ್ಜನ್ಯವನ್ನು ನೋಡಿಕೊಂಡು ನ್ಯಾಯಾಲಯ ಮುಖ ವೀಕ್ಷಕನಂತೆ ಇರಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳನ್ನು ಹತ್ತಿಕ್ಕಲು ಕಾನೂನುಗಳು ಸಮರ್ಥವಾಗಿಲ್ಲ. ಮಕ್ಕಳ ಅತ್ಯಾಚಾರಿಗಳನ್ನು ನಿರ್ವೀರ್ಯಗೊಳಿಸುವುದರಿಂದ ಅದ್ಭುತ ಫಲಿತಾಂಶ ಸಿಗುತ್ತದೆ ಎಂಬುದು ನ್ಯಾಯಾಲಯದ ಭರವಸೆಯಾಗಿದೆ ಎಂದು ನ್ಯಾ. ಎನ್. ಕಿರುಬಾಕರನ್ ತಿಳಿಸಿದ್ದಾರೆ.
ನಿರ್ವೀರ್ಯಗೊಳಿಸುವ ಕ್ರಮ ಅನಾಗರಿಕ ಎಂದು ಅನಿಸಬಹುದು, ಆದರೆ ಅನಾಗರಿಕ ಕೃತ್ಯಗಳಿಗೆ ಅನಾಗರಿಕ ರೀತಿಯ ಶಿಕ್ಷೆಯನ್ನೇ ನೀಡಬೇಕಿದೆ. ಇಂತಹ ಶಿಕ್ಷೆಯಿಂದ ಅಪರಾಧಿ ಮತ್ತೊಂದು ಬಾರಿ ಇಂತಹ ಅಪರಾಧ ಮಾಡುವುದಿಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.
ರಷ್ಯಾ, ಪೋಲ್ಯಾಂಡ್, ಅಮೆರಿಕಾದ 9 ರಾಜ್ಯ, ಫ್ಲೋರಿಡಾದಲ್ಲಿ ಈಗಾಗಲೇ ಈ ಶಿಕ್ಷೆ ಇದೆ ಎಂದು ಅವರು ಹೇಳಿದ್ದಾರೆ,
ತಮಿಳುನಾಡಿನಲ್ಲಿ 15 ವರ್ಷದ ಹುಡುಗನೊಬ್ಬನ ಮೇಲೆ ಅತ್ಯಾಚಾರ ಎಸಗಿದ್ದ ಬ್ರಿಟಿಷ್ ಪ್ರಜೆಯೊಬ್ಬ ಬಾಲಕನ ಶಿಕ್ಷಣದ ವೆಚ್ಚವನ್ನು ನಾನು ಭರಿಸುತ್ತೇನೆ, ನನ್ನ ಶಿಕ್ಷೆಯನ್ನು ಕಡಿತಗೊಳಿಸಿ ಎಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ನ್ಯಾಯಾಲಯ ಈ ಸಲಹೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.