ಅಹ್ಮದಾಬಾದ್: ಗುಜರಾತ್ನ ಖಂದೇರಿಯಲ್ಲಿರುವ ಕ್ರಿಕೆಟ್ ಸ್ಟೇಡಿಯಂ ಭಾರತದ ಎರಡನೇ ಸೋಲಾರ್ ಪವರ್ ಹೊಂದಿದ ದೇಶದ ಎರಡನೇ ಸ್ಟೇಡಿಯಂ ಆಗಿ ಹೊರಹೊಮ್ಮಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಸೋಲಾರ್ ಪವರ್ ಹೊಂದಿದ ಸ್ಟೇಡಿಯಂ.
ಈ ಸ್ಟೇಡಿಯಂನಲ್ಲಿ ಇತ್ತೀಚಿಗಷ್ಟೇ 50 ಕೆಡಬ್ಲ್ಯೂಪಿ ಸೋಲಾರ್ ರೂಫ್ಟಾಪ್ನ್ನು ಉದ್ಘಾಟನೆಗೊಳಿಸಲಾಯಿತು. ಇದರ ಬಳಿಕ ಇದರ ತಿಂಗಳ ವಿದ್ಯುತ್ ಬಿಲ್ 54,600 ರಷ್ಟು ಕಡಿಮೆಯಾಗಿದೆ, ಈ ಪ್ಲಾಂಟ್ ತಿಂಗಳಿಗೆ 6833 ಯುನಿಟ್ ಪವರನ್ನು ಉತ್ಪಾದಿಸುತ್ತದೆ. ವರ್ಷಕ್ಕೆ 82 ಸಾವಿರ ಯುನಿಟ್ ಪವರ್ ಉತ್ಪಾದಿಸುತ್ತದೆ. ವರ್ಷಕ್ಕೆ 5೦ ಟನ್ಗಳಷ್ಟು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಡಿತಗೊಳಿಸಲು ಇದು ಸಹಾಯಕವಾಗಲಿದೆ.
ಜರ್ಮನ್ ಮೂಲದ ಕಂಪನಿ ಇದನ್ನು ತಯಾರಿಸಿದ್ದು, ಭವಿಷ್ಯದಲ್ಲಿ ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಇಂಗಿತ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ಗೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.