ನ್ಯೂಯಾರ್ಕ್: ಜಾಗತಿಕ ತಾಪಮಾನ ದಿನೇ ದಿನೇ ಏರುತ್ತಿದ್ದು, 2015 ಅತೀ ಹೆಚ್ಚು ತಾಪಮಾನ ಹೊಂದಿದ ವರ್ಷ ಎಂದು ಇತಿಹಾಸದ ಪುಟದಲ್ಲಿ ದಾಖಲಾಗುವ ಹಾದಿಯಲ್ಲಿದೆ!
600 ವರ್ಷಗಳಲ್ಲಿ 2015 ಭೂಮಿಯು ಅತಿ ಹೆಚ್ಚು ಬಿಸಿಯನ್ನು ಹೊಂದಿದ ವರ್ಷವಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
1880ರ ಬಳಿಕ 2015ರ ಸೆಪ್ಟಂಬರ್ ಅತೀ ಬೆಚ್ಚಗಿನ ಸೆಪ್ಟಂಬರ್ ಆಗಿದ್ದು, 2015ರ ಆಗಸ್ಟ್ ಅತೀ ಬೆಚ್ಚಗಿನ ಆಗಸ್ಟ್. 2015ರ ಜುಲೈ ಅತೀ ಬೆಚ್ಚಗಿನ ಜುಲೈ ಎಂದು ರೆಕಾರ್ಡ್ ಮಾಡಿದೆ. ಜನವರಿ ಮತ್ತು ಎಪ್ರಿಲ್ ತಿಂಗಳುಗಳು ಮಾತ್ರ ದಾಖಲೆಯನ್ನು ಮುರಿದಿಲ್ಲ ಎಂದು ನ್ಯಾಷನಲ್ ಓಶಿಯನಿಕ್ ಮತ್ತು ಎಟೋಮಾಸ್ಪಿರಿಕ್ ಅಡ್ಮಿನಿಸ್ಟ್ರೇಶನ್ ತಿಳಿಸಿದೆ.
ಭೂಮಿಯ ತಾಪಮಾನ ಏರುತ್ತಲೇ ಇದ್ದು, ಇದು ಮುಂದಿನ ದಿನಗಳಲ್ಲಿ ಬಲು ದೊಡ್ಡ ಸವಾಲನ್ನು ತಂದೊಡ್ಡಲಿದೆ ಎಂದು ವಿಶ್ಲೇಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.