ಅಮರಾವತಿ: ಅಪಾರ ಜನಸ್ತೋಮದ ಸಾಕ್ಷಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಆಂಧ್ರಪ್ರದೇಶದ ರಾಜಧಾನಿ ಅಮರಾವತಿಗೆ ಗುರುವಾರ ಗುಂಟೂರು ಜಿಲ್ಲೆಯ ಉದ್ದಂಡರಾಯು ನಿಪಲೆಮ್ನಲ್ಲಿ ಶಂಕುಸ್ಥಾಪನೆಯನ್ನು ನೆರವೇರಿಸಿದರು.
ಅಮರಾವತಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕನಸಿನ ಕೂಸಾಗಿದ್ದು, ದೇಶದಲ್ಲೇ ಅತ್ಯಂತ ಸುಸಜ್ಜಿತ, ಅತ್ಯಾಧುನಿಕವಾಗಿ ರಾಜಧಾನಿಯನ್ನಾಗಿ ಇದನ್ನು ನಿರ್ಮಿಸುವ ಗುರಿಯನ್ನು ಅವರು ಹೊಂದಿದ್ದಾರೆ.
ನಾಯ್ಡು ಅವರ ಕರೆಯಂತೆ ಆಂಧ್ರದ 16 ಸಾವಿರ ಹಳ್ಳಿಗಳಿಂದ, ದೇಶದ ಪವಿತ್ರ ಕ್ಷೇತ್ರಗಳಿಂದ ನೀರು ಮತ್ತು ಮಣ್ಣನ್ನು ಅಮರಾವತಿಗಾಗಿ ನೀಡಲಾಯಿತು. ಜನರಲ್ಲಿ ಪಾಲ್ಗೊಳ್ಳುವಿಕೆಯ ಭಾವ ಬರಲಿ ಎಂಬ ಕಾರಣಕ್ಕಾಗಿ ಈ ಕರೆಯನ್ನು ನೀಡಲಾಯಿತು.
ಸಿಂಗಾಪುರ ಸರ್ಕಾರಿ ಏಜೆನ್ಸಿಗಳು ಈ ರಾಜಧಾನಿಯ ರೂಪರೇಷೆಗಳನ್ನು ಸಿದ್ಧಪಡಿಸಲಿವೆ ಎಂದು ಹೇಳಲಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ತೆಲಂಗಾಣ ಸಿಎಂ ಕೆ.ಎಸ್.ಚಂದ್ರಶೇಖರ್ ರಾವ್, ಸಚಿವ ವೆಂಕಯ್ಯ ನಾಯ್ಡು, ಸಚಿವೆ ನಿರ್ಮಲಾ ಸೀತಾರಾಮನ್ ಮುಂತಾದ ಹಲವು ಗಣ್ಯರು ಭಾಗವಹಿಸಿದ್ದರು.
ಸಂಸತ್ ಭವನದ ಮಣ್ಣು ಮತ್ತು ಯಮುನೆಯ ನೀರನ್ನು ಪ್ರಧಾನಿಯವರು ನಾಯ್ಡು ಅವರಿಗೆ ಈ ವೇಳೆ ಅರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.