ಗೋರೆಗಾಂವ್: ಆನ್ಲೈನ್ನಲ್ಲಿ ಕುರಿ ಮರಿಯಿಂದ ಹಿಡಿದು ಸಾಸಿವೆ ಕಾಳುಗಳೂ ಮಾರಾಟವಾಗುತ್ತವೆ. ಇದೀಗ ಅದಕ್ಕೆ ಹೊಸ ಸೇರ್ಪಡೆ ದನದ ಸೆಗಣಿಯಿಂದ ತಯಾರಿಸಿದ ಬೆರಣಿ.
ಹಿಂದೆ ಹಳ್ಳಿಯಲ್ಲಿ ಸೆಗಣಿಯನ್ನು ತಟ್ಟಿ ಬಿಸಿಲಿಗೆ ಒಣ ಹಾಕಿ ಬೆರಣಿಯನ್ನು ತಯಾರಿಸುತ್ತಿದ್ದರು. ಬೆಂಕಿ ತಯಾರಿಸಲು, ದೂಪಕ್ಕೆ, ವಿಭೂತಿಗೆ ಹೀಗೆ ನಾನಾ ಕಾರಣಕ್ಕೆ ಈ ಬೆರಣಿಗಳನ್ನು ಬಳಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆರಣಿ ನೋಡಲು ಸಿಗುವುದೇ ಅಪರೂಪ.
ಆದರೆ ಈಗ ಬೆರಣಿಗೂ ಬೇಡಿಕೆ ಬಂದಿದೆ. ಆನ್ಲೈನ್ ವೆಬ್ಸೈಟ್ ಶಾಪ್ಕ್ಲೂಸ್ ಇದನ್ನು ಮಾರಾಟ ಮಾಡುತ್ತಿದೆ. ಸಣ್ಣ ವ್ಯಾಪಾರಿಗಿಂದ ಇದನ್ನು ಖರೀದಿಸಿ ಮಾರಾಟ ಮಾಡುತ್ತಿದೆ. ‘ಆನ್ಲೈನ್ ಕರೋಲ್ ಭಾಗ್’ ಎಂದು ಇದಕ್ಕೆ ಹೆಸರಿಡಲಾಗಿದೆ. ಶೇ.31 ರಷ್ಟು ಡಿಸ್ಕೌಂಟ್ನಲ್ಲಿ ಇದನ್ನು ನೀಡಲಾಗುತ್ತಿದೆ. ಹಬ್ಬದ ಹಿನ್ನಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಖರೀದಿಸುತ್ತಿದ್ದಾರೆ.
ನೈಸರ್ಗಿಕ ಗೊಬ್ಬರಗಳಲ್ಲಿ ಸೆಗಣಿಯೂ ಅತ್ಯುತ್ತಮ. ಮಣ್ಣಿನ ಪುಷ್ಟೀಕರಣವು ಇದರಿಂದ ಆಗುತ್ತದೆ. ರಾಸಾಯನಿಕ ಗೊಬ್ಬರಗಳ ಭರಾಟೆಯಲ್ಲಿ ಹಳೆಯ ಕೃಷಿ ಪದ್ಧತಿಗಳು ಕಳೆದುಹೋಗಿವೆ. ಆದರೆ ರಾಸಾಯನಿಕ ಮುಕ್ತ ಆಹಾರ ಬೇಡಿಕೆ ಹೆಚ್ಚುತ್ತಿರುವ ಹಾಗೂ ಸಾವಯವ ಕೃಷಿಗೆ ಪುಷ್ಟಿ ನೀಡುತ್ತಿರುವ ಈ ಸಮಯದಲ್ಲಿ ಸೆಗಣಿ ಪ್ರಾಮುಖ್ಯತೆಯನ್ನು ವಹಿಸುತ್ತದೆ.
ಜೈವಿಕ ಅನಿಲ, ಅಡುಗೆ ಅಥವಾ ವಿದ್ಯುತ್ ಉತ್ಪಾದಿಸಲು ಇಂಧನವಾಗಿ ಸೆಗಣಿಯನ್ನು ಬಳಸಲಾಗುತ್ತಿದೆ. ಶಕ್ತಿಯ ಒಂದು ಅಗ್ಗದ ಪರ್ಯಾಯ ಮೂಲ ಉತ್ಪಾದಿಸುವಲ್ಲಿ ಸೆಗಣಿ ಬಳಕೆಯಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.