ನವದೆಹಲಿ: ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಲು ಅಲ್ಲಿನ ಪೊಲೀಸ್ ಆಯುಕ್ತ ಭೀಮ್ ಸೇನ್ ಬಸ್ಸಿ ಅವರು ಹೊಸತೊಂದು ಯೋಜನೆಯನ್ನು ಘೋಷಿಸಿದ್ದಾರೆ. ಭ್ರಷ್ಟ ಪೊಲೀಸರನ್ನು ಬಯಲಿಗೆಳೆದವರಿಗೆ 25ಸಾವಿರ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ.
ದೆಹಲಿ ಪೊಲೀಸ್ ಇಲಾಖೆ ದೇಶದಲ್ಲೇ ಅತ್ಯಂತ ಭ್ರಷ್ಟ ಇಲಾಖೆ ಎಂಬುದು ಇತ್ತೀಚಿನ ಸಮೀಕ್ಷೆಯೊಂದರಿಂದ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತಿರುವ ಬಸ್ಸಿಯವರು ಈ ಯೋಜನೆಯನ್ನು ಘೋಷಿಸಿದ್ದಾರೆ.
ಯಾವುದೇ ಪೊಲೀಸ್ ಭ್ರಷ್ಟಚಾರದಲ್ಲಿ ತೊಡಗಿರುವ ಬಗೆಗಿನ ವಿಡಿಯೋ ಅಥವಾ ಆಡಿಯೋವನ್ನು ನೀಡಿದರೆ ಅವರಿಗೆ 25 ಸಾವಿರ ಬಹುಮಾನ ಸಿಗಲಿದೆ ಮತ್ತು ನಾಗರಿಕರು ಲಂಚ ನೀಡಿದ ಬಗ್ಗೆ ಸಾಕ್ಷ್ಯ ಒದಗಿಸಿದವರಿಗೆ 10ಸಾವಿರ ಬಹುಮಾನ ಸಿಗಲಿದೆ.
ವಾಟ್ಸಾಪ್ ಮೂಲಕ 910641064 ನಂಬರ್ಗೆ ಆಡಿಯೋ ಅಥವಾ ವಿಡಿಯೋವನ್ನು ಕಳುಹಿಸಬಹುದಾಗಿದೆ. ಅಲ್ಲದೇ ಸಹಾಯವಾಣಿ 1064 ಮೂಲಕ ದೂರು ನೀಡಬಹುದಾಗಿದೆ.
ಬಹುಮಾನ ಪಡೆಯಲಾದರೂ ಜನ ಭ್ರಷ್ಟ ಪೊಲೀಸರ ನಿಜ ಮುಖವನ್ನು ಬಯಲು ಮಾಡುತ್ತಾರೆ. ಈ ಮೂಲಕ ಪೊಲೀಸ್ ಇಲಾಖೆ ಭ್ರಷ್ಟಾಚಾರ ಮುಕ್ತವಾಗುತ್ತದೆ ಎಂಬ ಆಶಯ ಬಸ್ಸಿ ಅವರದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.