ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರ ಮೇಲಿನ ದಾಳಿಯನ್ನು ಶಿವಸೇನೆ ತೀವ್ರಗೊಳಿಸಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಮೈತ್ರಿ ಪಕ್ಷಗಳ ನಡುವೆ ಬಿರುಕು ಮೂಡಿದೆ ಎಂಬ ಅಂಶ ಸ್ಪಷ್ಟವಾಗಿದೆ.
ಮೋದಿಯವರು ಶಿವಸೇನಾ ಮುಖಂಡ ಬಾಳಾಸಾಹೇಬ್ ಠಾಕ್ರೆಯವರಿಗೆ ಶಿರಭಾಗಿ ಕೈಮುಗಿಯುವ ಪೋಸ್ಟರ್ವೊಂದನ್ನು ಮುಂಬಯಿ ನಗರದಲ್ಲಿ ಹಾಕಿದ್ದು, ಇಂದು ಡೋಂಗಿ ಮಾಡುವವರು ಸಾಹೇಬ್ ಮುಂದೆ ತಲೆಬಾಗಿದ ದಿನವನ್ನು ಮರೆಯಬಾರದು ಎಂದು ಅದರಲ್ಲಿ ಬರೆದಿದೆ.
ಮೋದಿ ಮಾತ್ರವಲ್ಲದೇ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಎಲ್ಕೆ ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ರಾಜ್ ಠಾಕ್ರೆಯವರ ಚಿತ್ರವನ್ನೂ ಪೋಸ್ಟರ್ನಲ್ಲಿ ಹಾಕಲಾಗಿದೆ.
ಪೋಸ್ಟರ್ ವಿವಾದ ಹರಿದಾಡುತ್ತಿದ್ದಂತೆ ಶಿವಸೇನೆ ಅದನ್ನು ಕಿತ್ತು ಹಾಕಿದೆ. ಘಟನೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.