ನವದೆಹಲಿ: ವಿದ್ಯಾರ್ಥಿ ಸಮೀರ್ ಗೋಜ್ವಾರಿ ಎಂಬಾತ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಂದ ತನ್ನ ಎಂಬಿಎ ಪದವಿ ಸ್ವೀಕರಿಸಲು ನಿರಾಕರಿಸಿದ ಘಟನೆಗೆ ಮಾಧ್ಯಮಗಳು ಭರ್ಜರಿ ಪ್ರಚಾರವನ್ನು ನೀಡಿ ಸ್ಮೃತಿ ಇರಾನಿ ಅವರನ್ನು ಗುರಿಯಾಗಿಸಿದ್ದವು. ದೇಶದಲ್ಲಿ ಜನರ ಸ್ವಾತಂತ್ರ್ಯ ಕುಗ್ಗುತ್ತಿರುವ ಕುರಿತು ಪ್ರತಿಭಟನೆ ನಡೆಸಲು ಈತ ಸಚಿವೆ ಇರಾನಿ ಅವರಿಂದ ಪದವಿ ಸ್ವೀಕರಿಸಲು ನಿರಾಕರಿಸುವುದಾಗಿ ವರದಿ ಮಾಡಿದ್ದವು. ಆದರೆ ಇದರ ಸತ್ಯಾಂಶ ಈಗ ಹೊರ ಬಿದ್ದಿದೆ.
ಸಮೀರ್ ಹುರಿಯತ್ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಇಸಿಸ್ ಸಂಘಟನೆಯ ಬೆಂಬಲಿಗ ಕೂಡ ಹೌದು ಎಂದು ತಿಳಿದು ಬಂದಿದೆ. ಇದು ದೇಶದ ಆಂತರಿಕ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಮೀರ್ ಗೋಜ್ವಾರಿ ಹುರಿಯತ್ ನಾಯಕರೊಂದಿಗೆ ಸ್ಥಿರ ಸಂಪರ್ಕ ಹೊಂದಿದ್ದು, ದೇಶಾದ್ಯಂತ ದ್ವೇಷ ಹರಡುವ ಇಂಗಿತವನ್ನು ಹೊಂದಿದ್ದಾನೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸಮೀರ್ ಹುರಿಯತ್ ನಾಯಕರ ಅಭಿಮಾನಿಯಾಗಿದ್ದು, ಇಸಿಸ್ ಬೆಂಬಲಿನಾಗಿದ್ದಾನೆ ಎಂದು ಆತನ ಫೇಸ್ಬುಕ್ ಪ್ರೊಫೈಲ್ನಿಂದ ತಿಳಿದು ಬಂದಿದೆ.
ಜನರು ಆತನ ಫೇಸ್ಬುಕ್ ಪ್ರೊಫೈಲ್, ಆನ್ಲೈನ್ ಸ್ಟೇಟಸ್ ಹಾಗೂ ಗೆಳೆಯರನ್ನು ಹುಡುಕುತ್ತಿರುವ ಬಗ್ಗೆ ತಿಳಿಯುತ್ತಿದ್ದಂತೆ ಸಮೀರ್ ತನ್ನ ಫೇಸ್ಬುಕ್ ಅಕೌಂಟ್ನ್ನು ಅಳಿಸಿ ಹಾಕಿದ್ದಾನೆ. ಆದರೆ ಮಾಧ್ಯಮಗಳು ಆತನ ಬಗ್ಗೆ ಯಾವುದೇ ಮಾಹಿತಿ ಪಡೆಯದೇ ವರದಿ ಮಾಡಿರುವುದು ದುರಾದೃಷ್ಟ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.