
ಅದು 2025ರ ಮೇ ತಿಂಗಳು. ಸಾಮಾನ್ಯ ಮೀಡಿಯಾ ಮಾನಿಟರಿಂಗ್ ಕೆಲಸದ ನಡುವೆ, ಪೂರ್ವ ಉತ್ತರ ಪ್ರದೇಶದ ಒಂದು ಸಣ್ಣ ಪೊಲೀಸ್ ಬ್ರೀಫ್ ನನ್ನ ಗಮನ ಸೆಳೆಯಿತು. ಔಷಧವಿಲ್ಲದೆ ರೋಗಗಳು ಮಾಯವಾಗುತ್ತವೆ ಎಂದು ಭರವಸೆ ನೀಡುವ “ಪ್ರಾರ್ಥನಾ ಸಭೆ”ಯ ಬಗ್ಗೆ ದೂರು ಬಂದಿತ್ತು. ಇದೊಂದು ಕೇವಲ ಪ್ರತ್ಯೇಕ ಘಟನೆಯಂತೆ ಕಾಣಿಸಿತ್ತು. ಆದರೆ ತಿಂಗಳುಗಳು ಕಳೆದಂತೆ, ಭಾರತದಾದ್ಯಂತ ಹರಡಿದ ಇಂತಹ ಕೇಸುಗಳು ಒಂದು ಆಘಾತಕಾರಿ ಷಡ್ಯಂತ್ರವನ್ನು ಬಯಲುಮಾಡಿದವು. ವಿಭಿನ್ನ ರಾಜ್ಯಗಳು, ವಿಭಿನ್ನ ಪಾಸ್ಟರ್ಗಳು, ಆದರೆ ಒಂದೇ ಕುತಂತ್ರ, ʼನಕಲಿ ಗುಣಪಡಿಸುವಿಕೆಯ ಮೂಲಕ ಬಡವರನ್ನು ಮತಾಂತರಕ್ಕೆ ಒಳಪಡಿಸುವ ಸಂಘಟಿತ ಜಾಲʼ.
ಇದು ರೋಗ, ಬಡತನ ಮತ್ತು ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ವ್ಯವಸ್ಥಿತ ಷಡ್ಯಂತ್ರ. ಒಡೆದ ಕುಟುಂಬಗಳು ಮತ್ತು ಒತ್ತಡದಲ್ಲಿರುವವರು ಸುಲಭವಾಗಿ ಈ ಜಾಲಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ಸರಣಿಯಾಗಿ ಇಂತಹ ಘಟನೆಗಳು ನಡೆಯುತ್ತಲೇ ಇದೆ. 2025 ರ ಮೇಯಿಂದ ಡಿಸೆಂಬರ್ ವರೆಗಿನ FIRಗಳು, ನ್ಯಾಯಾಲಯ ಆದೇಶಗಳು ಮತ್ತು ಸ್ಥಳೀಯ ಸಾಕ್ಷ್ಯಗಳನ್ನು ಅನುಸರಿಸಿ, ಡೇಟಾ ಅನಲಿಸ್ಟ್ನ ನೋಟದಲ್ಲಿ ಈ ಮಾದರಿಯನ್ನು ಅನ್ವೇಷಿಸಿದ್ದೇನೆ. ಇದು ಪ್ರತ್ಯೇಕ ಘಟನೆಗಳಲ್ಲ, ಬದಲಿಗೆ ದೇಶವ್ಯಾಪಿ ಹರಡಿದ ಕಬಂಧಬಾಹುಗಳು.
ಮೇ 2025: ಅಕ್ಬರಪುರದ ಬೆಲ್ಹಾರಿ ಬಾಗ್ನಲ್ಲಿ ಒಂದು ಸಣ್ಣ ಕೋಣೆ ಪ್ರಾರ್ಥನಾ ಹಾಲ್ಗೆ ಪರಿವರ್ತಿತವಾಯಿತು. ಒಂದು ದಲಿತ ಕುಟುಂಬಕ್ಕೆ “ನಿಮ್ಮ ರೋಗ ಇಂದು ಕೊನೆಗೊಳ್ಳುತ್ತದೆ.” ಎಂಬ ಭರವಸೆ ನೀಡಲಾಯಿತು. ಆರೋಪಿ ದೈವಿಕ ಗುಣಪಡಿಸುವಿಕೆಯ ಹೆಸರಿನಲ್ಲಿ ಹಿಂದೂ ಧಾರ್ಮಿಕ ವಸ್ತುಗಳನ್ನು ಸಂಗ್ರಹಿಸಿ, 50,000 ರೂಪಾಯಿ ನೀಡಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸಿದರು. ಪೊಲೀಸರು ಧಾರ್ಮಿಕ ಪ್ರಚಾರ ಪತ್ರಿಕೆಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡರು. ರಾಜ್ಯದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ FIR ದಾಖಲಾಯಿತು.
ಆ ಸಮಯದಲ್ಲಿ ಇದು ಪ್ರತ್ಯೇಕ ಘಟನೆಯೆನಿಸಿತು. ಆದರೆ ನಾನು ತಪ್ಪು ಮಾಡಿದ್ದೆ – ಇದು ಒಂದು ದೊಡ್ಡ ಚಿತ್ರದ ಮೊದಲ ಚಿತ್ರಣ ಮಾತ್ರ. ಜೂನ್ 2025: ಮಾದರಿಯ ಉದಯಜೂನ್ನಲ್ಲಿ ಜಬಲ್ಪುರ (ಮಧ್ಯಪ್ರದೇಶ) ಮತ್ತು ಪಿಲಿಭಿತ್ (ಉತ್ತರ ಪ್ರದೇಶ)ದಿಂದ ವರದಿಗಳು ಬಂದವು. ಜಬಲ್ಪುರದಲ್ಲಿ ರೋಗಿ ಮಹಿಳೆಗೆ ಹೊಸ ಧರ್ಮ ಸ್ವೀಕರಿಸಿದರೆ ಮಾತ್ರ ಗುಣವಾಗುತ್ತದೆ ಎಂದು ಹೇಳಲಾಯಿತು. 2,000 ರೂಪಾಯಿ ನೀಡಿ ಉತ್ತಮ ಆರೋಗ್ಯ ಮತ್ತು ಆರ್ಥಿಕ ಲಾಭಗಳ ಭರವಸೆ ನೀಡಿ ಒತ್ತಡ ಹೇರಲಾಯಿತು. ರಾಯ್ಪುರದ ಸರಸ್ವತಿ ನಗರದಲ್ಲಿ 150ಕ್ಕೂ ಹೆಚ್ಚು ಗ್ರಾಮಸ್ಥರು ನಕಲಿ ಗುಣಪಡಿಸುವ ಕಾರ್ಯಕ್ರಮದಲ್ಲಿ ಸೇರಿದ್ದರು.ಪಿಲಿಭಿತ್ನಲ್ಲಿ ಒಬ್ಬ ಮಹಿಳೆಯನ್ನು ನದಿಗೆ ಕರೆದೊಯ್ದು ಕಣ್ಣುಕಟ್ಟಿ ಆಚರಣೆಗಳು ನಡೆದವು. ಅವಳ ರೋಗ ಹಳೆಯ ನಂಬಿಕೆಗಳಿಂದ ಬಂದಿದೆ ಎಂದು ಹೇಳಿ ಮತಾಂತರ ಒತ್ತಾಯಿಸಲಾಯಿತು. ಪ್ರತಿ ಕೇಸ್ ಒಂದೇ ಸ್ಕ್ರಿಪ್ಟ್ ಅನ್ನು ಹೊಂದಿತ್ತು. ಅದೇಂದರೆ
- ರೋಗ ಅಥವಾ ದುರ್ಬಲತೆಯನ್ನು ಗುರುತಿಸುವುದು
- ಪ್ರಾರ್ಥನೆಯ ಮೂಲಕ ತಕ್ಷಣ ಗುಣ ಮಾಡುತ್ತೇವೆ ಎಂದು ಭರವಸೆ ನೀಡುವುದು
- ರೋಗವನ್ನು ಮತಾಂತರಕ್ಕೆ ಲಿಂಕ್ ಮಾಡುವುದು
- ಬೆದರಿಕೆ ಅಥವಾ ಒತ್ತಡ ಹೆಚ್ಚಿಸುವುದು
ಜುಲೈ–ಆಗಸ್ಟ್ 2025: ವಿಸ್ತರಣೆ ಮತ್ತು ಬಂಧನಗಳು ಜುಲೈಯಲ್ಲಿ ವಿಶುನ್ಪುರ (ಉತ್ತರ ಪ್ರದೇಶ)ದಲ್ಲಿ ಪ್ರಾರ್ಥನಾ ಸಭೆಯನ್ನು ಪೊಲೀಸ್ ಭಂಗಗೊಳಿಸಿತು. ಮುಖ್ಯ ಸಂಘಟಕ ಓಡಿಹೋದರೂ, ಉಳಿದವರನ್ನು ಬಂಧಿಸಲಾಯಿತು. ಬಿಲಾಸ್ಪುರ (ಛತ್ತೀಸ್ಗಢ)ದಲ್ಲಿ ಸ್ಥಳೀಯ ಹಿಂದೂ ಕಾರ್ಯಕರ್ತರು ಚಂಗಾಯಿ ಸಭೆಯನ್ನು ಬಯಲುಮಾಡಿದರು.ಆಗಸ್ಟ್ನಲ್ಲಿ ಬಿಲಾಸ್ಪುರ ಮತ್ತು ಇಸ್ಲಾಮ್ನಗರದಲ್ಲಿ FIRಗಳು ದಾಖಲಾಯಿತು. “ಚಂಗಾಯಿ ಸಭಾ” ಪದ ಮತ್ತೆ ಕಾಣಿಸಿಕೊಂಡಿತು – ಗುಣಪಡಿಸುವ ಸಭೆಗಳು ನಂತರ ಮತಾಂತರ ಡ್ರೈವ್ಗಳಾಗಿ ತಿರುಗಿದವು. ಪೊಲೀಸ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ಮತ್ತು BNS ಸೆಕ್ಷನ್ 299ರಡಿ ಪಾಸ್ಟರ್ ಸುಖ್ನಂದನ್ ಲಾಹ್ರೆ ಮತ್ತು ರಘುನಂದನ್ ಲಾಹ್ರೆಯನ್ನು ಬಂಧಿಸಿತು.
ಇದು ಕೇವಲ ನಂಬಿಕೆಯ ದುರಾಡಳಿತವಲ್ಲ, ದುರ್ಬಲರನ್ನು ಗುರಿಯಾಗಿಸುವ ಸಂಘಟಿತ ವಿಧಾನವೆನಿಸಿತು.ಸೆಪ್ಟೆಂಬರ್ 2025: ಗುಂಪುಗಳು ದೊಡ್ಡದಾಗುತ್ತವೆನಿಗೋಹಾನ್ ಮತ್ತು ಮಲ್ಖಾನ್ (ಉತ್ತರ ಪ್ರದೇಶ)ದಲ್ಲಿ ಪಾಸ್ಟರ್ ತನ್ನ ಫಾರ್ಮ್ನಲ್ಲಿ ಸಭೆಗಳು ನಡೆಸಿದರು. ಅಪಸ್ಮಾರದ ಬಾಲಕ ಸೇರಿದಂತೆ ರೋಗಿಗಳ ಮೇಲೆ ನಕಲಿ ಚಮತ್ಕಾರಿಕ ಗುಣಪಡಿಸುವಿಕೆ ನಡೆದು, ಪ್ರಾರ್ಥನೆಗಳು ಗುಣಮಾಡುತ್ತವೆ ಎಂದು ಹೇಳಲಾಯಿತು. ಹಣ ಮತ್ತು ಲಾಭಗಳ ಭರವಸೆ ನೀಡಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಬ್ಯಾಪ್ಟಿಸಂ ಒತ್ತಡ ಹೇರಲಾಯಿತು.ಹಜಾರೀಬಾಗ್ (ಝಾರ್ಖಂಡ್) ಮತ್ತು ಬುಂಡಿಯಾ (ಛತ್ತೀಸ್ಗಢ)ದಲ್ಲಿ ಸಭೆಗಳು ದೊಡ್ಡದಾದವು. ಸಂಪೂರ್ಣ ಗ್ರಾಮಗಳನ್ನು ಆಹ್ವಾನಿಸಲಾಯಿತು. ಕೆಲವು ಆರೋಪಿಗಳು ಮತಾಂತರದ ನಂತರ ಯಾರೂ ರೋಗಿಯಾಗುವುದಿಲ್ಲ ಎಂದು ಭರವಸೆ ನೀಡಿದರು. ಇನ್ನು ಕೆಲವರು ಆಸ್ಪತ್ರೆ ಚಿಕಿತ್ಸೆ ಭರವಸೆ ನೀಡಿದರೂ, ಅದು ಎಂದಿಗೂ ಬರಲಿಲ್ಲ.
ಡಿಸೆಂಬರ್ 2025: ದೇಶವ್ಯಾಪಿ ಕ್ರ್ಯಾಕ್ಡೌನ್ ಮತ್ತು ವಿವಾದಗಳುಡಿಸೆಂಬರ್ನಲ್ಲಿ ಘಟನೆಗಳು ಉತ್ತುಂಗಕ್ಕೇರಿದವು. ಮಿರ್ಜಾಪುರದಲ್ಲಿ ಚರ್ಚ್ ಮೇಲೆ ಪೊಲೀಸ್ ದಾಳಿ ನಡೆಯಿತು, ಹಿಂದೂಗಳನ್ನು ಮತಾಂತರಕ್ಕೆ ಒತ್ತಾಯಿಸಿದ ಆರೋಪ.
ಗೋಹ್ಪುರದಲ್ಲಿ ಸ್ವಯಂಪ್ರಕಟಿತ ಹೀಲರ್ ಅನ್ನು ಬಂಧಿಸಲಾಯಿತು.
ಪುಣೆಯಿಂದ ಝಾರ್ಖಂಡ್ವರೆಗೆ ಪೊಲೀಸ್ ಕೇಸುಗಳು ಹೆಚ್ಚಾದವು, ಸಂಘಟಿತ ನಕಲಿ ಮಿರಾಕಲ್ ಕ್ಯೂರ್ಗಳನ್ನು ಬಯಲುಮಾಡಿದವು.
ಆದರೆ ಈ ಆರೋಪಗಳು ವಿವಾದಾತ್ಮಕ. ಕೆಲವು ಸೋರ್ಸಸ್ ಪ್ರಕಾರ, ಕ್ರಿಶ್ಚಿಯನ್ ಪಾಸ್ಟರ್ಗಳ ಮೇಲೆ ಫಾಲ್ಸ್ ಆರೋಪಗಳು ಹಾಕಲಾಗುತ್ತಿದೆ ಎಂದು ಹೇಳಲಾಗಿದೆ.
ಅಲ್ಲಾಹಾಬಾದ್ ಹೈಕೋರ್ಟ್ ಕ್ರಿಶ್ಚಿಯನ್ ಸಾಹಿತ್ಯ ವಿತರಣೆಯನ್ನು ಮತಾಂತರವಲ್ಲ ಎಂದು ತೀರ್ಪು ನೀಡಿತು.
ಇದು ಧಾರ್ಮಿಕ ಸ್ವಾತಂತ್ರ್ಯ ಮತ್ತು ದುರುಪಯೋಗ ನಡುವಿನ ಸೂಕ್ಷ್ಮ ಗಡಿ.ಈ ಕಾಲಕ್ರಮದಿಂದ ಸ್ಪಷ್ಟವಾಗುವುದು: ನಕಲಿ ಗುಣಪಡಿಸುವಿಕೆಯ ಹೆಸರಿನಲ್ಲಿ ಮತಾಂತರ ಒಂದು ಸಂಘಟಿತ ವ್ಯವಸ್ಥೆಯಾಗಿದೆ. ಆದರೆ ಎಲ್ಲಾ ಆರೋಪಗಳು ಸತ್ಯವೋ ಅಥವಾ ರಾಜಕೀಯ ಪ್ರೇರಿತವೋ ಎಂಬುದು ಚರ್ಚೆಗೆ ಒಳಪಟ್ಟಿದೆ. ಡೇಟಾ ಹೇಳುವುದು ಒಂದೇ: ಇದು ದುರ್ಬಲರನ್ನು ಗುರಿಯಾಗಿಸುವ ಮಾದರಿ, ಮತ್ತು ಅದನ್ನು ನಿಗಾ ಮಾಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



