ಲಕ್ನೋ: ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಅವರ ಪತ್ನಿ ಜಯಾ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ಇನ್ನು ಮುಂದೆ ಪ್ರತಿ ತಿಂಗಳು ಉತ್ತರಪ್ರದೇಶ ಸರ್ಕಾರದಿಂದ ತಲಾ 50ಸಾವಿರ ರೂಪಾಯಿ ಪಿಂಚಣಿಯನ್ನು ಪಡೆದುಕೊಳ್ಳಲಿದ್ದಾರೆ.
ಉತ್ತರಪ್ರದೇಶದ ಅತ್ಯುನ್ನತ ಪ್ರಶಸ್ತಿ ಯಶ್ ಭಾರ್ತಿ ಸಮ್ಮಾನ್ ಪುರಸ್ಕೃತರಿಗೆ ಪ್ರತಿ ತಿಂಗಳು 50 ಸಾವಿರ ಪಿಂಚಣಿ ನೀಡಲು ಅಲ್ಲಿನ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಈ ಮೂವರು ಬಚ್ಚನ್ಗಳೂ ಈ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಹೀಗಾಗಿ ಇವರಿಗೂ ಪಿಂಚಣಿ ದೊರೆಯಲಿದೆ.
ಗಾಯಕಿ ರೇಖಾ ಭಾರಧ್ವಾಜ್, ಪಂಡಿತ್ ರಾಜನ್ ಮತ್ತು ಸಾಜನ್ ಮಿಶ್ರಾ, ಬೇಕಲ್ ಉತ್ಸಾಹಿ, ಪದ್ಮಶ್ರೀ ವಿಜೇತ ಅರುಣಿಮಾ ಸಿನ್ಹಾ, ಜೀತು ರೈ, ಕಥಕ್ ನೃತ್ಯಗಾರ್ತಿ ಕುಂಕುಮ್ ಧರ್, ಗಜಲ್ ಗಾಯಕಿ ರೀತಾ ಗಾಂಗೂಲಿ, ಚಿತ್ರ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಜಿಮ್ಮಿ ಶೇರ್ಗಿಲ್, ಗಾಯಕ ಕೈಲಾಶ್ ಖೇರ್, ಅಲಕಾ ತೋಮರ್ ಈ ಬಾರಿಯ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿದ್ದಾರೆ.
ಸಮಾಜವಾದಿ ಪಕ್ಷ ಆಡಳಿತದಲ್ಲಿ ಇರುವ ತನಕ ಮಾತ್ರ ಈ ಸೌಲಭ್ಯ ಅನ್ವಯವಾಗಲಿದ್ದು, ಬೇರೆ ಸರ್ಕಾರ ಬಂದರೆ ಈ ಯೋಜನೆ ಕಡಿತವಾಗಲಿದೆ.
50 ಸಾವಿರ ಭಾರತದಲ್ಲೇ ಅತ್ಯಂತ ಹೆಚ್ಚಿನ ಪಿಂಚಣಿಯಾಗಿದ್ದು, ಸರ್ಕಾರಿ ಅಧಿಕಾರಿಗಳೂ ಇದಕ್ಕಿಂತ ಕಡಿಮೆ ಪಿಂಚಣಿ ಪಡೆಯುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರು, ಅವರ ಸಂಗಾತಿಗಳೂ ಕೇವಲ 20, 129 ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ. ಮಾಜಿ ಜನಪ್ರತಿನಿಧಿಗಳು 23,309 ಪಿಂಚಣಿ ಪಡೆಯುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ನಿರುದ್ಯೋಗಿ ಪುತ್ರಿಯರು 4,770 ರೂ ಪಿಂಚಣಿ ಪಡೆಯುತ್ತಿದ್ದಾರೆ.
ಇದೀಗ ಯಶ್ ಭಾರ್ತಿ ಪ್ರಶಸ್ತಿ ವಿಜೇತರಿಗೆ 50 ಸಾವಿರ ನೀಡಲು ನಿರ್ಧರಿಸಿರುವ ಯುಪಿ ಸರ್ಕಾರದ ಕ್ರಮಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾಗಿದೆ. ಅದರಲ್ಲೂ ಕೋಟ್ಯಾಧಿಪತಿಗಳಿಗೆ ಈ ರೀತಿ ಪಿಂಚಣಿ ನೀಡಿ ಸರ್ಕಾರ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.