ನವದೆಹಲಿ: ಗೋಹತ್ಯೆಯ ವಿಷಯವನ್ನು ಜಾತ್ಯಾತೀತರು, ಪ್ರಗತಿಪರರು ತಮ್ಮ ಸೆಕ್ಯೂಲರ್ ಪಾಲಿಟಿಕ್ಸ್ಗೆ ಪ್ರೋಟಿನ್ ಆಗಿ ಬಳಕೆ ಮಾಡುತ್ತಿದ್ದಾರೆ ಎಂದು ಆರ್ಎಸ್ಎಸ್ ಆರೋಪಿಸಿದೆ.
ಹಿಂದೂ ನಂಬಿಕೆಗಳ ಮೇಲೆ ದಾಳಿ ನಡೆಸಲು ದಾದ್ರಿ ಘಟನೆಯನ್ನು ಇವರುಗಳು ಅವಕಾಶವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ನೂರಾರು ಸಿಖ್ರ ಹತ್ಯೆಯಾದಾಗ, ಗೋದ್ರಾದಲ್ಲಿ ಕರಸೇವಕರ ಹತ್ಯೆಯಾದಾಗ ಇವರ ಆತ್ಮಸಾಕ್ಷಿ ಜಾಗೃತಗೊಳ್ಳಲಿಲ್ಲವೇಕೆ ಎಂದು ಆರ್ಎಸ್ಎಸ್ ತನ್ನ ಮುಖವಾಣಿ ಆರ್ಗನೈಸರ್ನಲ್ಲಿ ಪ್ರಶ್ನಿಸಿದೆ.
ಪ್ರತಿ ಕೊಲೆ ಕೂಡ ಕ್ರೂರ ಮತ್ತು ದುರಾದೃಷ್ಟಕರ. ಕಾನೂನು ಇದರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕು. ಆದರೆ ದಾದ್ರಿ ಘಟನೆಯನ್ನು ಜಾತ್ಯಾತೀತರು, ಲಿಬರಲ್ಗಳು, ಮಾಧ್ಯಮಗಳು ಹಿಂದೂ ನಂಬಿಕೆಯ ಮೇಲೆ ಆಕ್ರಮಣ ಮಾಡಲು ಬಳಸಿಕೊಂಡಿವೆ. ಹೆಣವನ್ನೂ ಹೇಗೆ ರಾಜಕೀಯ ತಂತ್ರಕ್ಕೆ ಬಳಸಿಕೊಳ್ಳಬಹುದು ಎಂಬುದಕ್ಕೆ ಕಠೋರ ಸಾಕ್ಷಿಯಾಗಿ ದಾದ್ರಿ ಘಟನೆ ನಮಗೆ ಗೋಚರವಾಗುತ್ತದೆ ಎಂದು ಅದು ಹೇಳಿದೆ.
ದೇಶದಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ ಎಂದು ಪ್ರತಿಪಾದಿಸುವ ಮೂಲಕ ಇವರುಗಳು ಮಾನಸಿಕ ಭಯ ಮತ್ತು ಅಲ್ಪಸಂಖ್ಯಾತರಲ್ಲಿ ಬೆದರಿಕೆ ಹುಟ್ಟುವಂತೆ ಮಾಡುತ್ತಿದ್ದಾರೆ. ಭಾರತದ ಗೌರವ ಜಗತ್ತಿನ ಮುಂದೆ ಕುಂಠಿತವಾದರೂ ಇವರುಗಳಿಗೆ ಚಿಂತೆಯಿಲ್ಲ.
ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಆಕ್ರಮಣಗಳಿಂದಾಗಿ ಅವರು ಭಯೋತ್ಪಾದನೆಯತ್ತ ವಾಲುತ್ತಿದ್ದಾರೆ ಎಂದು ಅಜಂಖಾನ್ ಅವರು ಹೇಳುತ್ತಾರೆ. ಹಾಗಾದರೆ ನಿರಂತರವಾಗಿ ಪಾಕಿಸ್ಥಾನದಲ್ಲಿ ದೇಗುಲವನ್ನು ನಾಶಪಡಿಸಲಾಗುತ್ತಿದೆ. ಹಿಂದೂಗಳ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ಆದರೂ ಅಲ್ಲಿ ಅವರೇಕೆ ಭಯೋತ್ಪಾದಕರಾಗಿ, ಮಾನವ ಬಾಂಬ್ಗಳಾಗಿ ಪರಿವರ್ತನೆಗೊಂಡಿಲ್ಲ? ಎಂದು ಅದು ಪ್ರಶ್ನಿಸಿದೆ.
ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರನ್ನು ಕೊಲ್ಲಲು ಬೀದಿಗಿಳಿಸಿದ್ದಾರೆ ಎಂಬ ಸಂದೇಶವನ್ನು ಜಾತ್ಯಾತೀತರು ಬಿತ್ತರಿಸುತ್ತಿದ್ದಾರೆ. ಕಳೆದ 15 ದಿನದಿಂದ ಇಂತಹ ವಾತಾವರಣ ನಿರ್ಮಾಣವಾಗಿದೆ. ದಾದ್ರಿಯಲ್ಲಿ ನಡೆದ ಒಂದು ಹತ್ಯೆಯಿಂದ ಭಾರತ ಉರಿಯುತ್ತಿದೆ. ಆಗಾದರೆ ಕಳೆದ 67 ವರ್ಷದಲ್ಲಿ ಭಾರತ ಆನಂದಮಯ ಸಾಮರಸ್ಯದಲ್ಲೇ ಇತ್ತೇ? ಎಂದು ಅದು ಪ್ರಶ್ನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.