ಅಗರ್ತಾಲ: ತ್ರಿಪುರದ ದುರ್ಗಾಪೂಜೆಗೆ ೫೦೦ ವರ್ಷಗಳ ಇತಿಹಾಸವಿದ್ದು, ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ದುರ್ಗಾ ಪೂಜೆ ಇದಾಗಿದೆ, ಈಶಾನ್ಯ ಭಾಗದ ಭಕ್ತರ ಶ್ರದ್ಧಾ ಭಕ್ತಿಯ ಪೂಜೆ ಇದಾಗಿದ್ದು, ರಾಜವಂಶದ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಇಲ್ಲಿ ಪೂಜೆ ನೆರವೇರುತ್ತದೆ.
ತ್ರಿಪುರ ಈಶಾನ್ಯ ರಾಜ್ಯವಾಗಿದ್ದು, ಕಮ್ಯೂನಿಸ್ಟ್ ಸರ್ಕಾರ ಇಲ್ಲಿ ಆಡಳಿತ ನಡೆಸುತ್ತಿದೆ. 5 ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ದುರ್ಗಾ ಪೂಜೆಗೆ ಸರ್ಕಾರ ನಿರಂತರವಾಗಿ ಅನುದಾನ ನೀಡುತ್ತಲೇ ಬಂದಿದೆ.
ದುರ್ಗಾ ಮೂರ್ತಿಯನ್ನು ಸೋಮವಾರ ಪ್ರತಿಷ್ಠಾಪನೆಗೊಳಿಸಲಾಗಿದ್ದು, ಇದನ್ನು ಮಹಾ ಸಸ್ತಿ ಅಥವಾ ಬೋಧನ್ ಎಂದು ಕರೆಯಲಾಗುತ್ತದೆ, 114ವರ್ಷ ಹಳೆಯ ಉಜ್ಜಾಂತ ಪ್ಯಾಲೇಸ್ ಮುಂಭಾಗದಲ್ಲಿರುವ ದುರ್ಗಬರಿ ದೇಗುಲದಲ್ಲಿ ಪೂಜೆ ನರೆವೇರುತ್ತದೆ.
ತ್ರಿಪುರದಲ್ಲಿ ರಾಜವಂಶದ ಆಡಳಿತ ಆರಂಭವಾದ ಕೆಲ ವರ್ಷಗಳ ಬಳಿಕ ಸುಮಾರು 500 ವರ್ಷಗಳ ಹಿಂದೆ ರಾಜ ಈ ದುರ್ಗಾ ಪೂಜೆಯನ್ನು ಆರಂಭಿಸಿದ. ಬಳಿಕ ನಿರಂತರವಾಗಿ ಪೂಜೆ ನಡೆಯುತ್ತಲೇ ಬಂದಿದೆ. ತ್ರಿಪುರ ಅಧಿಕೃತವಾಗಿ ಭಾರತವನ್ನು ಸೇರ್ಪಡೆಗೊಂಡ ಬಳಿಕ ಅಲ್ಲಿನ ಸರ್ಕಾರ ನಿರಂತರವಾಗಿ ಈ ಪೂಜೆಗೆ ಅನುದಾನ ನೀಡುತ್ತಿದೆ. ಎಡಪಂಥೀಯ ಸರ್ಕಾರವೇ ಇರಲಿ, ಇನ್ನಿತರ ಸರ್ಕಾರವೇ ಇರಲಿ ಅನುದಾನ ನೀಡುವ ಸಂಪ್ರದಾಯ ಮುಂದುವರೆಯುತ್ತಲೇ ಬಂದಿದೆ.
ಇದೀಗ ಅದು ಈಶಾನ್ಯ ಭಾಗದ ಅತೀದೊಡ್ಡ ಧಾರ್ಮಿಕ, ಸಾಂಸ್ಕೃತಿಕ ಹಬ್ಬವಾಗಿ ರೂಪುಗೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.