ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯುವ ಯಾವುದೇ ಅವಕಾಶವನ್ನೂ ಎಎಪಿ ಕಳೆದುಕೊಳ್ಳುತ್ತಿಲ್ಲ. ಅಲ್ಲದೇ ದೆಹಲಿ ಪೊಲೀಸರನ್ನು ತಮ್ಮ ಅಧೀನಕ್ಕೆ ತರಬೇಕು ಎಂಬ ಆಗ್ರಹವನ್ನು ಅದು ಸದಾ ಕೇಂದ್ರದ ಮುಂದಿಡುತ್ತಲೇ ಇದೆ.
ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ‘ಮೋದಿಯವರೇ ಹಠವನ್ನು ಬಿಟ್ಟು ನಮ್ಮೊಂದಿಗೆ ಕೈಜೋಡಿಸಿ. ಪೊಲೀಸ್ ಇಲಾಖೆ ಮತ್ತು ಭ್ರಷ್ಟಾಚಾರ ನಿಗ್ರಹ ದಳವನ್ನು ದೆಹಲಿ ಸಕಾರಕ್ಕೆ ನೀಡಿ. ಒಂದು ವರ್ಷದಲ್ಲಿ ಎಲ್ಲವನ್ನೂ ಸರಿಪಡಿಸುತ್ತೇವೆ’ ಎಂದಿದ್ದಾರೆ.
ದೆಹಲಿ ಪೊಲೀಸ್ ಇಲಾಖೆ ಅತ್ಯಂತ ಭ್ರಷ್ಟವಾಗಿದೆ ಎಂಬುದಾಗಿ ಸಮೀಕ್ಷೆಯೊಂದು ಹೇಳಿದ್ದು, ಇದಕ್ಕೆ ಕೇಜ್ರಿವಾಲ್ ಅವರು ಕೇಂದ್ರವೇ ಕಾರಣ ಎಂದಿದ್ದಾರೆ. ಅಲ್ಲದೇ ದೆಹಲಿ ಸರ್ಕಾರದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆ ಎಂದು ಸಮೀಕ್ಷೆ ಹೇಳಿದ್ದು ಇದು ಎಎಪಿಯ ನಿಯತ್ತನ್ನು ತೋರಿಸುತ್ತದೆ ಎಂದಿದ್ದಾರೆ.
ದೆಹಲಿಯಲ್ಲಿ ಅಪರಾಧ ಕಡಿಮೆಯಾಗುವವರೆಗೂ ನಾನು ಮೋದಿಯನ್ನು ಶಾಂತಿಯಿಂದ ಇರಲು ಬಿಡುವುದಿಲ್ಲ. ಶೀಲಾ ದೀಕ್ಷಿತ್ ಅಂತೆ ಸುಮ್ಮನಿರುವ ಜಾಯಮಾನ ನನ್ನದಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.