ನವದೆಹಲಿ: ಇಸಿಸ್ಗೆ ಭಾರತೀಯರನ್ನು ನೇಮಕಾತಿ ಮಾಡುತ್ತಿದ್ದ ಆರೋಪದ ಮೇರೆಗೆ ಬಂಧಿತಳಾಗಿರುವ ಅಪ್ಸಾ ಜಬೀನ್ ಭಯಾನಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾಳೆ.
ಇಸಿಸ್ನ ಆರು ಸಕ್ರಿಯ ಸದಸ್ಯರು ಭಾರತದಲ್ಲಿ ಈ ಸಂಘಟನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಮುಂಬಯಿಯವರು, ಉಳಿದವರು ಹೈದರಾಬಾದ್, ಬೆಂಗಳೂರು ಮತ್ತು ಜಮ್ಮು ಕಾಶ್ಮೀರಕ್ಕೆ ಸೇರಿದವರು ಎಂದು ಆಕೆ ಹೇಳಿದ್ದಾಳೆ.
ಅಲ್ಲದೇ ಇವರಲ್ಲಿ ಕೆಲವರ ಹೆಸರನ್ನು ಆಕೆ ಬಹಿರಂಗಪಡಿಸಿದ್ದು, ಅವರ ಮೇಲೆ ನಿಗಾ ಇಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಸಿಸ್ ಸಂಘಟನೆಗೆ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇರೆಗೆ ಯುಎಇ ಅಧಿಕಾರಿಗಳು ಕಳೆದ ತಿಂಗಳು ಬಂಧಿಸಿ ಭಾರತಕ್ಕೆ ನೀಡಿದ್ದರು, ಇದೀಗ ಆಕೆ ಸೈಬರಾಬಾದ್ ಪೊಲೀಸ್ ಠಾಣೆಯಲ್ಲದ್ದಾಳೆ. ಈಕೆ ಹೈದರಾಬಾದ್ನ ತೊಲಿಚೌಕಿ ನಿವಾಸಿ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.