ಮೇಜರ್ ದೇವೇಂದ್ರ ಪಾಲ್ ಸಿಂಗ್ ಭಾರತದ ಹೆಮ್ಮೆಯ ಯೋಧನಾಗಿ ಸೇವೆ ಸಲ್ಲಿಸಿದವರು, 1999ರಲ್ಲಿ ಕಾರ್ಗಿಲ್ ಸಂಘರ್ಷದ ವೇಳೆ ತಾಯ್ನಾಡಿಗಾಗಿ ಹೋರಾಟ ಸಡೆಸಿದ ಇವರ 1.5 ಮೀಟರ್ ದೂರದಲ್ಲೇ ಶತ್ರಗಳು ಎಸೆದ ಮೋಟಾರ್ ಬಾಂಬ್ ಒಂದು ಸ್ಪೋಟಗೊಂಡಿತು. 8 ಮೀಟರ್ ದೂರದ ವರೆಗೆ ಮನುಷ್ಯರನ್ನು, ವಸ್ತುಗಳನ್ನು ನಾಶ ಮಾಡುವ ಸಾಮರ್ಥ್ಯ ಈ ಬಾಂಬ್ಗಿತ್ತು.
ಈ ಬಾಂಬ್ ಸಿಡಿದ ತಕ್ಷಣವೇ ಸಿಂಗ್ ಪ್ರಜ್ಞಾಹೀನರಾದರು, ಆರ್ಮಿ ಆಸ್ಪತ್ರೆಯ ವೈದ್ಯರು ಇವರು ಮೃತಪಟ್ಟಿದ್ದಾರೆ ಎಂದೇ ಘೋಷಿಸಿಬಿಟ್ಟರು. ಆದರೆ 3 ದಿನಗಳ ಬಳಿಕ ಇವರು ಪವಾಡ ಸದೃಶ್ಯರಾಗಿ ಎಚ್ಚೆತ್ತರು. ಆದರೆ ಒಂದು ಕಾಲನ್ನು ಅವರು ಕಳೆದುಕೊಳ್ಳಬೇಕಾಯಿತು.
ಆ ಬಾಂಬ್ನಲ್ಲಿ ನನ್ನ ಹೆಸರಿತ್ತು ಆದರೂ ಅದಕ್ಕೆ ನನ್ನನ್ನು ಕೊಲ್ಲಲು ಸಾಧ್ಯವಾಗಿಲ್ಲ ಎಂದು ಈಗಲೂ ಸಿಂಗ್ ಜೋಕ್ ಮಾಡುತ್ತಾರೆ.
ಕಾಲು ಕಳೆದಕೊಂಡ ಬಳಿಕ ಸಮ್ಮನೆ ಕೈಕಟ್ಟಿ ಕುಳಿತುಕೊಂಡಿದ್ದರೆ ಬಹುಶಃ ಇಂದು ಇವರ ಬಗ್ಗೆ ನಮಗ್ಯಾರಿಗೂ ತಿಳಿಯುತ್ತಿರಲಿಲ್ಲ. ತನ್ನ ವಿಕಲಾಂಗತೆಯನ್ನೇ ಹಿಮ್ಮಟ್ಟಿ ನಿಂತ ಈ ಯೋಧ ನೆಗೆಟಿವ್ನ್ನು ಪಾಸಿಟಿವ್ ಆಗಿ ಪರಿವರ್ತಿಸಿದ ಮತ್ತು ಒಬ್ಬ ಅದ್ಭುತ ಅಥ್ಲೇಟ್, ಮ್ಯಾರಥಾನ್ ಪಟು ಎನಿಸಿದರು. ಈ ಮೂಲಕ ಡಿಪಿ ಸಿಂಗ್ ಎಂದು ಭಾರತಕ್ಕೆ ಚಿರಪರಿಚಿತರಾದರು.
ಒಂದು ಕಾಲಿಗೆ ತನಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಬ್ಲೇಡ್ ಹಾಕಿಕೊಂಡು ಮೈದಾನಕ್ಕಿಳಿದರೆ ಇವರನ್ನು ಹಿಮ್ಮೆಟ್ಟುವುದು ಹರಸಾಹಸವೇ ಸರಿ. ನೋಡು ನೋಡುತ್ತಲೇ ಇವರು ವಿಕಲಚೇತನ ಅಥ್ಲೇಟ್ನ ಬಹು ಮುಖ್ಯ ಪ್ರತಿಭೆ ಎನಿಸಿಕೊಂಡರು.
ಹಲವಾರು ಹಾಲ್ಫ್ ಮ್ಯಾರಥಾನ್ ಓಡಿರುವ, ಅಥ್ಲೇಟಿಕ್ಸ್ನಲ್ಲಿ ಪ್ರಶಸ್ತಿ ಬಾಚಿರುವ ಇವರು ಈಗ ವಿಕಲಚೇತನರ ಪಾಲಿನ ಆದರ್ಶ. ಅಂಗವಿಕಲರನ್ನು ನೋಡುವ ಜನರ ಮನಸ್ಥಿತಿಯನ್ನು ಬದಲಿಸಿದಾತರಿವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.