ಮುಂಬಯಿ: ಶಿವಸೇನೆಯ ತೀವ್ರ ಪ್ರತಿಭಟನೆಯ ಹಿನ್ನಲೆಯಲ್ಲಿ ಸೋಮವಾರ ನಿಗಧಿಯಾಗಿದ್ದ ಭಾರತ-ಪಾಕಿಸ್ಥಾನ ಕ್ರಿಕೆಟ್ ಸರಣಿಯ ಮಾತುಕತೆ ಮುರಿದು ಬಿದ್ದಿದೆ.
ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರು ಅವರನ್ನು ಭೇಟಿಯಾಗುವುದಕ್ಕೆ ಕೆಲವೇ ಸಮಯದ ಮುನ್ನ ಬಿಸಿಸಿಐ ಕಛೇರಿಗೆ ಮುತ್ತಿಗೆ ಹಾಕಿದ ಶಿವಸೇನಾ ಸದಸ್ಯರು ದೊಡ್ಡ ರಾದ್ಧಾಂತವನ್ನೇ ನಡೆಸಿದರು.
ಪಾಕ್ ವಿರೋಧಿ ಸ್ಲೋಗನ್ಗಳುಳ್ಳ ಫಲಕಗಳನ್ನು ಹಿಡಿದು, ‘ಶಹರ್ಯಾರ್ ಗೋ ಬ್ಯಾಕ್’ ಎಂದು ಕೂಗುತ್ತಾ ಶಂಶಾಕ್ ಅವರಿಗೆ ಮುತ್ತಿಗೆ ಹಾಕಿದರು. ಅಲ್ಲದೇ ಸರಣಿ ಮಾತುಕತೆ ನಡೆಸದಂತೆ ಎಚ್ಚರಿಕೆ ನೀಡಿದರು.
ಶಹರ್ಯಾರ್ ಬಿಸಿಸಿಐನೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಭಾನುವಾರ ಭಾರತಕ್ಕೆ ಆಗಮಿಸಿದ್ದರು.
ಶಿವಸೇನೆಯ ವರ್ತನೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಸಿಸಿಐ ಜವಾಬ್ದಾರಿಯುತ ಸಂಘಟನೆ, ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಅದು ಏನನ್ನೂ ಮಾಡಲಾರದು ಎಂದಿದೆ.
2015ರಿಂದ 2023ರ ನಡುವೆ ಭಾರತ-ಪಾಕ್ ನಡುವೆ ಆರು ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸಲು ಬಿಸಿಸಿಐ ಮತ್ತು ಪಿಸಿಬಿ ಉದ್ದೇಶಿಸಿದ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.