ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದಿರುವ ಅತಿದೊಡ್ಡ ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದ ಮತ್ತೋರ್ವ ವ್ಯಕ್ತಿ ಮೃತರಾಗಿದ್ದಾರೆ, ಇತರ ಆರೋಪಿಗಳಂತೆ ಇವರು ಕೂಡ ಸಂಶಯಾಸ್ಪದ ರೀತಿಯಲ್ಲಿ ಮರಣವನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಅರಣ್ಯ ಸೇವಾ ದಳ(ಐಎಫ್ಎಸ್) ನಿವೃತ್ತ ಅಧಿಕಾರಿ ವಿಜಯ್ ಬಹದ್ದೂರ್ ಅವರು ಒರಿಸ್ಸಾದ ಜರ್ಸುಗುಡ ರೈಲ್ವೇ ಟ್ರಾಕ್ಯ್ನಲ್ಲಿ ಹೆಣವಾಗಿ ಬಿದ್ದಿದ್ದರು. ಅ.15 ರಂದು ಅವರು ಮೃತದೇಹ ಪತ್ತೆಯಾಗಿತ್ತು,
1978ರ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿರುವ ಬಹದ್ದೂರ್ ಅವರು ವ್ಯಾಪಮ್ ಆಯೋಜಿಸಿದ್ದ ಎರಡು ನೇಮಕಾತಿ ಪರೀಕ್ಷೆಗಳಲ್ಲಿ ಅಬ್ಸರ್ವರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಇವರು ತಮ್ಮ ಪತ್ನಿಯೊಂದಿಗೆ ಪುರಿಗೆ ತೆರಳಿ ತಮ್ಮ ಬ್ಯಾಚ್ನ ಅಧಿಕಾರಗಳ ರೀ ಯೂನಿಯನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಮತ್ತೆ ಭೋಪಾಲಕ್ಕೆ ವಾಪಾಸ್ ಬರುವ ವೇಳೆ ಅವರು ಟ್ರ್ಯಾಕ್ನಲ್ಲಿ ಹೆಣವಾಗಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಚಲಿಸುವ ರೈಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಹೇಗೆ ಕೆಳಕ್ಕೆ ಬಿದ್ದರು ಎಂಬೂದು ಇನ್ನೂ ನಿಗೂಢವಾಗಿಯೇ ಇದೆ. ಎಸಿ ಕಾಂಪರ್ಟ್ಮೆಂಟ್ನ ಬಾಗಿಲ ಬಳಿ ಹೋದ ತನ್ನ ಪತಿ ಮತ್ತೆ ವಾಪಾಸ್ ಮರಳಲಿಲ್ಲ ಎಂದು ಅವರ ಪತ್ನಿ ಹೇಳಿದ್ದಾರೆ ಎನ್ನಲಾಗಿದೆ.
ಈಗಾಗಲೇ ವ್ಯಾಪಮ್ಗೆ ಸಂಬಂಧಿಸಿದ ಅನೇಕ ಮಂದಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಇವರ ಸಾಲಿಗೆ ಇದೀಗ ಬಹುದ್ದೂರ್ ಅವರೂ ಸೇರ್ಪಡೆಗೊಂಡಿದ್ದಾರೆ. ಈ ಸಾವಿನ ಸರಣಿಯ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.