ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆರೋಪಿಯಾಗಿ ಸಮನ್ಸ್ ನೀಡಲು ಪಟಿಯಾಲ ಹೌಸ್ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಜಾರ್ಖಾಂಡ್ನ ಮಾಜಿ ಮುಖ್ಯಮಂತ್ರಿ ಮಧು ಕೋಡ ಅವರು ಸಿಂಗ್ ಅವರನ್ನು ಆರೋಪಿ ಎಂದು ಪರಿಗಣಿಸಿ ಅವರಿಗೆ ಸಮನ್ಸ್ ಜಾರಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು.
ಅಲ್ಲದೇ ಅಮರಕೊಂಡ ಮುರ್ಗದಂಗಲ್ ಕಲ್ಲಿದ್ದಲು ನಿಕ್ಷೇಪವನ್ನು ಜಿಂದಾಲ್ ಸ್ಟೀಲ್ ಆಂಡ್ ಪವರ್ ಲಿಮಿಟೆಡ್ ಮತ್ತು ಗಗನ್ ಸ್ಪೋಂಜ್ ಐರನ್ ಪ್ರೈ.ಲಿಗೆ ಹಂಚಿಕೆ ಮಾಡುವಲ್ಲಿ ನಡೆದ ಹಗರಣದ ಸಂದರ್ಭದಲ್ಲಿ ಸಿಂಗ್ ಕೈಯಲ್ಲಿ ಕಲ್ಲಿದ್ದಲಲು ಸಚಿವಾಲಯವಿತ್ತು. ಹೀಗಾಗಿ ಅವರು ಕೂಡ ಆರೋಪಿ ಎಂದು ಕೋಡ ಆರೋಪಿಸಿದ್ದರು.
ಕೋಡಾ ಅವರೂ 15 ಆರೋಪಿಗಳ ಪೈಕಿ ಒಬ್ಬರಾಗಿದ್ದು, ಸಿಂಗ್ಗೆ ಸಮನ್ಸ್ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.
ಇದೀಗ ತನ್ನನ್ನು ಆರೋಪಿಯಾಗಿಸಿ ಸಮನ್ಸ್ ನೀಡಲು ಕೋರ್ಟ್ ನಿರಾಕರಿಸಿದ್ದರಿಂದ ಸಿಂಗ್ ಅವರು ನಿರಾಳರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.