ನವದೆಹಲಿ: ಆಪಾದನೆಗಳಿಗೆ ಗುರಿಯಾಗಿ ನಿಷೇಧಕ್ಕೊಳಗಾಗಿರುವ ಮ್ಯಾಗಿ ನೂಡಲ್ಸ್ ಮತ್ತೆ ಭಾರತದ ಮಾರುಕಟ್ಟೆಗಳಲ್ಲಿ ರಾರಾಜಿಸುವ ಸಂಭವ ದಟ್ಟವಾಗಿದೆ.
ಈಗಾಗಲೇ ಮ್ಯಾಗಿ ಬಾಂಬೆ ಹೈಕೋರ್ಟ್ ಆದೇಶದಂತೆ 3 ಲ್ಯಾಬೋರೇಟರಿಗಳ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಹೀಗಾಗಿ ಮಾರುಕಟ್ಟೆಗೆ ಮತ್ತೆ ಲಗ್ಗೆ ಇಡುವ ಅವಕಾಶ ಅದಕ್ಕೆ ದೊರಕಲಿದೆ.
ಒಟ್ಟು 90 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಸೀಸಾದ ಪ್ರಮಾಣ ಅನುಮತಿಯ ಮಟ್ಟದಲ್ಲೇ ಇದೆ ಎಂಬುದು ಸಾಬೀತಾಗಿದೆ. ಲ್ಯಾಬೋರೇಟರಿಯ ವರದಿ ನಮ್ಮ ಕೈಗೆ ಸಿಕ್ಕಿದೆ ಎಂದು ನೆಸ್ಲೇ ಇಂಡಿಯಾ ತನ್ನ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದೆ.
ಅಲ್ಲದೇ ಉತ್ಪನ್ನವನ್ನು ಮತ್ತೆ ಮರುಪರಿಚಯಿಸಲಿದ್ದೇವೆ ಎಂದು ಅದು ಹೇಳಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.