×
Home About Us Advertise With s Contact Us

ಸರಿಯಾದ ಸಂಸ್ಕಾರ ಸಿಗುವಂತಾದಾಗ ಭಾರತೀಯತೆ ಉಳಿಯಲು ಸಾಧ್ಯ

ಬೈಂದೂರು : ಪ್ರತೀ ಮನೆಗಳಲ್ಲಿ ಮಕ್ಕಳಿಗೆ ಸರಿಯಾದ ಸಂಸ್ಕಾರ ಸಿಗುವಂತಾದಾಗ ಭಾರತೀಯತೆ ಉಳಿಯಲು ಸಾಧ್ಯವಾಗುತ್ತದೆ, ಶಾಲೆಗಳು ಸಮಾಜದ ಕಣ್ಣುಗಳಂತೆ. ಶಾಲಾಭಿವೃದ್ಧಿಯಲ್ಲಿ ಸಮಾಜ ಕೈಜೋಡಿಸಿದಾಗ ಸರ್ವ ಶಿಕ್ಷಣ ಅಭಿಯಾನದ ಯಶಸ್ಸನ್ನು ಕಾಣಬಹುದು ಎಂದು ಯಳಜಿತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಸಂಘದ ಸಂಚಾಲಕ ಹಾಗೂ ದಾರ್ಶನಿಕ ವೈ ಮಂಗೇಶ್ ಶೆಣೈ ಹೇಳಿದರು.

BYN-Apl07-5-Wash-Besin

ಉಪ್ಪುಂದ ಜೆಸಿಐ ಘಟಕ ಹಾಗೂ ಕೊಡಿಯಾಲ್‌ಕೇರಿ ಪೋಷಕರ ಶ್ರಮದಾನದಲ್ಲಿ ಸಕಿಪ್ರಾ ಶಾಲೆಯಲ್ಲಿ ನಿರ್ಮಾಣಗೊಂಡ ಕೈತೊಳೆಯುವ ತೊಟ್ಟಿ(ವಾಶ್ ಬೇಸಿನ್ ಯೂನಿಟ್) ಉದ್ಘಾಟಿಸಿ ಅನಂತರ ನಡೆದ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಪ್ಪುಂದ ಜೆಸಿಐ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ರವಿರಾಜ್ ಎಂ. ನಾಯ್ಕ್, ಸಹಶಿಕ್ಷಕಿ ಸಾಕು ನಾಯ್ಕ್ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗೋವಿಂದ ಮರಾಠಿ ಸ್ವಾಗತಿಸಿ, ಉಪಾಧ್ಯಕ್ಷೆ ವಸಂತಿ ಗೌಡ ವಂದಿಸಿದರು. ಜೆಸಿಐ ಕಾರ್ಯದರ್ಶಿ ರಾಮಕೃಷ್ಣ ಖಾರ್ವಿ ನಿರೂಪಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!