ನವದೆಹಲಿ: ಭಾರತದ ಮೊದಲ ಪ್ರಧಾನಿಯನ್ನು ಹುಡುಕಾಡಿದರೆ, ಗೂಗಲ್ನಲ್ಲಿ ಜವಹಾರ್ ಲಾಲ್ ನೆಹರೂ ಅವರ ಬದಲು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೋರಿಸುತ್ತಿದೆ.
ಮಾಹಿತಿ ಎಲ್ಲವೂ ನೆಹರೂರವರದ್ದೇ ಇದೆ. ಆದರೆ ಅದರಲ್ಲಿನ ಭಾವಚಿತ್ರ ಮಾತ್ರ ಮೋದಿಯದ್ದಾಗಿದೆ. ಈ ಮೂಲಕ ವಿಶ್ವದ ಖ್ಯಾತ ಸರ್ಚ್ ಎಂಜಿನ್ ಗೂಗಲ್ ದೊಡ್ಡ ಎಡವಟ್ಟನ್ನೇ ಮಾಡಿಕೊಂಡಿದೆ.
ಈ ಹಿಂದೆ ವಿಶ್ವದ ಟಾಪ್ 10 ಕ್ರಿಮಿನಲ್ಗಳನ್ನು ಹುಡುಕಾಡಿದಾಗ ಅದರಲ್ಲಿ ಮೋದಿಯವರ ಭಾವಚಿತ್ರವೂ ಬರುತ್ತಿತ್ತು, ಇದಕ್ಕೆ ಭಾರೀ ಆಕ್ರೋಶಗಳು ವ್ಯಕ್ತವಾದ ಹಿನ್ನಲೆಯಲ್ಲಿ ಎಚ್ಚೆತ್ತ ಗೂಗಲ್ ತಪ್ಪನ್ನು ಸರಿಪಡಿಸಿಕೊಂಡಿತ್ತು. ಮೋದಿಯ ಕ್ಷಮೆಯನ್ನೂ ಕೇಳಿತ್ತು.
ತಾಂತ್ರಿಕ ದೋಷಗಳಿಂದಾಗಿ ಗೂಗಲ್ನಂತಹ ದೊಡ್ಡ ಸರ್ಚ್ ಎಂಜಿನ್ಗಳಲ್ಲಿ ಇಂತಹ ಎಡವಟ್ಟುಗಳು ನಡೆಯುತ್ತದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.