ನವದೆಹಲಿ: ರಷ್ಯಾದ S-400 Triumf ರಕ್ಷಣಾ ಕ್ಷಿಪಣಿ ಖರೀದಿಸುವ ಯೋಜನೆ ಹೊಂದಿರುವ ಭಾರತ, ಪಾಕಿಸ್ಥಾನ ಹಾಗೂ ಚೀನಾಗೆ ಎಚ್ಚರಿಕೆ ಗಂಟೆ ಬಾರಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಆಡಳಿತ ಶೀಘ್ರದಲ್ಲೇ ರಷ್ಯಾದ ಅಧಿಕಾರಿಗಳೊಂದಿಗೆ ಈ ಕುರಿತು ಪ್ರಸ್ತಾಪ ಮಾಡಲಿದೆ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ತಿಂಗಳಲ್ಲಿ ರಷ್ಯಾಗೆ ಭೇಟಿ ನೀಡಲಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಕ್ಷಿಪಣಿ ಖರೀದಿಸುವ ವಿಚಾರ ಪ್ರಸ್ತಾಪಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಅಲ್ಲದೇ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರೂ ರಷ್ಯಾಗೆ ಭೇಟಿ ನೀಡುವ ಸಾಧ್ಯತೆ ಇದೆ.
S-400 Triumf ರಕ್ಷಣಾ ಕ್ಷಿಪಣಿ ಹೊಸ ಪೀಳಿಗೆಯ ವಿಮಾನ-ನಿರೋಧಕ (anti- aircraft) ವ್ಯವಸ್ಥೆಯಾಗಿದ್ದು, 400 ಕಿ.ಮಿ, 250 ಕಿ.ಮಿ. ಹಾಗೂ 120 ಕಿ.ಮಿ. ವರೆಗಿನ ಕ್ಷಿಪಣಿಗಳನ್ನು ಅಳವಡಿಸಬಹುದಾಗಿದೆ. S-400 Triumf ತಾಂತ್ರಿಕ ಅಲ್ಲದೇ ಎಲ್ಲಾ ರೀತಿಯ ವಾಯು ದಾಳಿ ಶಸ್ತ್ರಾಸ್ತ್ರಗಳು, ಯುಎಸ್-35 ಫೈಟರ್ ಜೆಟ್ಗಳನ್ನೂ ಎದುರಿಸುವ ಸಾಮರ್ಥ್ಯ ಹೊಂದಿದೆ.
S-400ನಲ್ಲಿ 72 ಕ್ಷಿಪಣಿಗಳನ್ನು 5ರಿಂದ 30 ಕಿ.ಮಿ. ಅಂತರದಲ್ಲಿ ಜೋಡಿಸಬಹುದಾಗಿದೆ. ಭಾರತವು 10-12 S-400 ಖರೀದಿಸುವ ಯೋಜನೆ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.