ಕೋಲ್ಕತ್ತಾ: ಪಶ್ಚಿಮಬಂಗಾಳದಲ್ಲಿ ದುರ್ಗಾ ಪೂಜೆಯ ಸಂಭ್ರಮ ಕಳೆಗಟ್ಟಿದೆ. ವಿವಿಧ ಭಂಗಿಯ ದುರ್ಗೆಯರ ಮೂರ್ತಿಗಳು ಇಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಆದರೆ ಈ ಬಾರಿಯ ವಿಶೇಷತೆ ಎಂದರೆ ತೃತೀಯ ಲಿಂಗಿ ದೇವಿಯ ಮೂರ್ತಿ.
ಶಿವನ ಅರ್ಧನಾರೀಶ್ವರ ರೂಪದಿಂದ ಪ್ರೇರಿತಗೊಂಡು ಇದೇ ಮೊದಲ ಬಾರಿಗೆ ಅಲ್ಲಿ ಅರ್ಧ ಹೆಣ್ಣು ಮತ್ತು ಅರ್ಧ ಗಂಡಿನ ರೂಪದ ದೇವಿಯ ಮೂರ್ತಿಯನ್ನು ರಚಿಸಲಾಗಿದೆ. ತೃತೀಯ ಲಿಂಗಿಗಳನ್ನೂ ದುರ್ಗಾ ಪೂಜೆಯ ಸಂಭ್ರಮದ ಭಾಗಿಗಳಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶ.
ಉತ್ತರ ಕೋಲ್ಕತ್ತಾದ ಜಾಯ್ ಮಿತ್ರ ಸ್ಟ್ರೀಟ್ನಲ್ಲಿ ದೇಶದ ಮೊತ್ತ ಮೊದಲ ತೃತೀಯ ಲಿಂಗೀಯ ದುರ್ಗಾ ಮೂರ್ತಿಯನ್ನು ಇಡಲಾಗಿದೆ, ಪ್ರತ್ಯಾಯ್ ಜೆಂಡರ್ ಟ್ರಸ್ಟ್ ಎಂಬ ಲೈಂಗಿಕ ಹಕ್ಕುಗಳ ಸಂಘಟನೆ ಉದ್ದಮಿ ಯುವ ವೃಂದದ ಸಹಕಾರದೊಂದಿಗೆ ಇದನ್ನು ಆಯೋಜನೆ ಮಾಡಿದೆ. ಪೂಜೆ ಲಿಂಗ ತಾರತಮ್ಯ ಸೇರಿದಂತೆ ಎಲ್ಲಾ ಬೇಧವನ್ನು ಹೊಡೆದು ಹಾಕುತ್ತದೆ ಎಂಬುದನ್ನು ಸಾರಲು ಇದನ್ನು ಆಯೋಜಿಸಲಾಗಿದೆ.
ಉದ್ದಮಿ ಯುವಕ ವೃಂದ ಕಳೆದ 27 ವರ್ಷದಿಂದ ದುರ್ಗಾ ಪೂಜೆ ನಡೆಸುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಅನೇಕ ಸಂಖ್ಯೆಯ ತೃತೀಯ ಲಿಂಗಿಗಳನ್ನು ತನ್ನ ಸಮಿತಿಗೆ ಸೇರ್ಪಡಿಸಿಕೊಂಡಿದೆ ಮತ್ತು ಅವರೊಂದಿಗೆ ದುರ್ಗಾ ಪೂಜೆಯ ಸಂಭ್ರಮವನ್ನು ಆಚರಿಸುತ್ತಿದೆ.
ಚಿನಾ ಪಾಲ್ ಎಂಬ ಏಕೈಕ ಮೂರ್ತಿ ತಯಾರಕ ಮಹಿಳಾ ಕಲಾವಿದೆಈ ಮೂರ್ತಿಯನ್ನು ರಚಿಸಿದ್ದು, ಇದಕ್ಕೆ ೫೫ ವರ್ಷದ ತೃತೀಯ ಲಿಂಗಿ ಭಾನು ನಸ್ಕಾರ್ ಎಂಬುವವರು ವಿಶೇಷ ಮೆರುಗನ್ನು ನೀಡಿದ್ದಾರೆ. ಅರ್ಧ ಧೋತಿ ಮತ್ತು ಅರ್ಧ ಸೀರೆ ಉಟ್ಟ ರೀತಿಯಲ್ಲಿ ಈ ಮೂರ್ತಿಯನ್ನು ರಚಿಸಲಾಗಿದೆ.
ದುರ್ಗಾ ಪೂಜೆಯಲ್ಲಿ ಪುರುಷರು ಮತ್ತು ಕೆಲ ಜಾತಿಗಳು ಮಾತ್ರ ಪ್ರಾಬಲ್ಯ ಮೆರೆಯುತ್ತವೆ, ಇದೆಲ್ಲವನ್ನು ತೊಡೆದು ಹಾಕುವುದು ನಮ್ಮ ಮುಖ್ಯ ಉದ್ದೇಶ ಎಂದು ಆಯೋಜಕರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.