ತಿರುವನಂತಪುರಂ: ತನ್ನ ಸಹಾಯಕನಿಂದ ಕಾಲಿನ ಶೂ ತೆಗಿಸಿಕೊಳ್ಳುವ ಮೂಲಕ ಕೇರಳ ಸ್ಪೀಕರ್ ಎನ್.ಸಕ್ತಾನ್ ಅವರು ವಿವಾದಕ್ಕೀಡಾಗಿದ್ದಾರೆ.
ಅವರ ಸಹಾಯಕ ಅವರ ಶೂ ತೆಗೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೀಡಾಗಿದೆ. ಕೆಲವರು ಇವರ ರಾಜೀನಾಮೆ ಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೇರಳದ ವಿಧಾನಸಭೆಯ ಆವರಣದಲ್ಲಿ ನಡೆದ ಸುಗ್ಗಿ ಹಬ್ಬದ ವೇಳೆ ಈ ಘಟನೆ ನಡೆದಿದೆ.
ಆದರೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಸಕ್ತಾನ್, ಅನಾರೋಗ್ಯವಿರುವ ಕಾರಣ ದೇಹವನ್ನು ಬಾಗಿಸದಂತೆ ವೈದ್ಯರು ನನಗೆ ಸಲಹೆ ನೀಡಿದ್ದಾರೆ. ಅದಲ್ಲದೇ ನನ್ನ ಸಂಬಂಧಿಕ ಮತ್ತು ಸಹಾಯಕನಾದ ಬಿಜುವಿಗೆ ನನ್ನ ಶೂ ತೆಗೆಯುವಂತೆ ನಾನು ಹೇಳಲೂ ಇಲ್ಲ. ಆತನೇ ಮುಂದಾಗಿ ಬಂದು ನನಗೆ ಸಹಾಯ ಮಾಡಿದ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.