ಬರ್ಲಿನ್: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೋಗಳನ್ನು ಎಲ್ಲರೂ ನೋಡುವಂತೆ ಪೋಸ್ಟ್ ಮಾಡದಿರಲು ಪೋಷಕರಿಗೆ ಪಶ್ಚಿಮ ಬರ್ಲಿನ್ನ ಪೊಲೀಸ ಇಲಾಖೆ ಮನವಿ ಮಾಡಿದೆ.
ಮುದ್ದಾಗಿ ಕಾಣುವ ಮಕ್ಕಳ ಫೋಟೋಗಳು ಮುಂದಿನ ವರ್ಷಗಳಲ್ಲಿ ಮಕ್ಕಳನ್ನು ಮುಜುಗರಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ಹ್ಯಾಗನ್ ಪೊಲೀಸರು ಪೋಷಕರಿಗೆ ಮನವಿ ಮಾಡಿಕೊಂಡಿದ್ದಾರೆ.
ಇಂತಹ ಫೋಟೋಗಳನ್ನು ಶಿಶುಕಾಮುಕರು ಇಲ್ಲವೇ ಅಪಹರಣಕಾರರು ಬಳಸುವ ಮೂಲಕ ದುರ್ಬಳಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಗೌಪ್ಯತೆಯತ್ತ ಪೋಷಕರು ಗಮನ ಹರಿಸಬೇಕೆಂದು ಎಚ್ಚರಿಕೆ ನೀಡಿದೆ.
ಕನಿಷ್ಟ ಪಕ್ಷ ಪೋಷಕರು ಸಾಮಾಜಿಕ ಜಾಲತಾಣಗಳ ಫೋಟೋಗಳನ್ನು ಅಪರಿಚಿತರು ನೋಡದಂತೆ ಪ್ರೈವೆಸಿ ಸೆಟ್ಟಿಂಗ್ನ್ನು ಬದಲಾಯಿಸಬೇಕು ಎಂದು ಹ್ಯಾಗನ್ ಪೊಲೀಸ್ ವಕ್ತಾರ ಟಿನೋ ಷ್ಯಾಫರ್ ಹೇಳಿದ್ದಾರೆ. ಫೇಸ್ಬುಕ್ನಲ್ಲಿ ಈ ಮನವಿಯನ್ನು ಪೋಸ್ಟ್ ಮಾಡಲಾಗಿದ್ದು, ಈವರೆಗೆ 7 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಹಾಗೂ ಜನರು ಇದನ್ನು 1,00,00ಕ್ಕೂ ಅಧಿಕ ಬಾರಿ ಇದನ್ನು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.