ನವದೆಹಲಿ: ಬೆಂಗಳೂರಿನ ವಾಯುವ್ಯ ಭಾಗದಲ್ಲಿ ನಿತ್ಯ ಸಂಭವಿಸುವ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ 8 ವರ್ಷದ ಬಾಲಕನೊಬ್ಬ ಈ ಸಮಸ್ಯೆಯನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿಯೇ ಹೇಳಿಕೊಂಡಿದ್ದಾನೆ. ಇದಕ್ಕೆ ಪ್ರತಿಯಾಗಿ ಪ್ರಧಾನಿಯಿಂದ ಸಮಸ್ಯೆ ಈಡೇರಿಕೆಯ ಭರವಸೆಯನ್ನೂ ಪಡೆದುಕೊಂಡಿದ್ದಾನೆ.
ಅಭಿನವ್ 3ನೇ ತರಗತಿಯ ವಿದ್ಯಾರ್ಥಿ. ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರದ ನಿವಾಸಿ, 3 ಕಿ.ಮೀ ದೂರದಲ್ಲಿರುವ ಯಶವಂತಪುರದಲ್ಲಿನ ತನ್ನ ಶಾಲೆ ನ್ಯಾಷನಲ್ ಪಬ್ಲಿಕ್ ಸ್ಕೂಲ್ಗೆ ಹೋಗಲು ಈತನಿಗೆ ಪ್ರತಿನಿತ್ಯ 40 ನಿಮಿಷ ತಗಲುತ್ತದೆ.
ಇದೀಗ ಪ್ರಧಾನಿಗೆ ಪತ್ರ ಮುಖೇನ ತನ್ನ ಸಮಸ್ಯೆಯನ್ನು ತೋಡಿಕೊಂಡಿರುವ ಅಭಿನವ್, ರಿಂಗ್ ರೋಡ್ ಹೊರವಲಯದ ಗೊರಗುಂಟೇಪಾಳ್ಯ ಜಂಕ್ಷನ್ ರೈಲ್ವೇ ಕ್ರಾಸಿಂಗ್ ಬಳಿ ಫ್ಲೈಓವರ್ ಕಾಮಗಾರಿ ಹಿನ್ನಲೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸಾಕಷ್ಟು ಜನರು ಇದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ದೂರಿದ್ದಾನೆ.
’ರಸ್ತೆಯಲ್ಲಿ ಸಂಚರಿಸುವುದು ಇದೀಗ ದೊಡ್ಡ ರಿಸ್ಕ್ ಆಗಿದೆ, ಹೀಗಾಗಿ ಪ್ರಧಾನಿಗೆ ಪತ್ರ ಬರೆದೆ, ಅವರು ಈ ದೇಶದ ಉನ್ನತ ಅಧಿಕಾರಿ ಮತ್ತು ಅವರಿಂದ ಯಾವುದೇ ಸಮಸ್ಯೆಯನ್ನೂ ನಿವಾರಿಸಲು ಸಾಧ್ಯ’ ಎಂದು ಅಭಿನವ್ ಹೇಳಿದ್ದಾನೆ.
ಅಭಿನವ್ ಪತ್ರವನ್ನು ಸ್ವೀಕರಿಸಿರುವ ಪ್ರಧಾನಿ ಸಚಿವಾಲಯ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.