ಟೆಲ್ ಅವೀವ್: ಪ್ರಣಬ್ ಮುಖರ್ಜಿ ಅವರು ಇಸ್ರೇಲ್ ಸಂಸತ್ತುನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಮೂರು ರಾಷ್ಟ್ರಗಳಾದ ಜೋರ್ಡಾನ್, ಪ್ಯಾಲೆಸ್ಟೇನ್ ಹಾಗೂ ಇಸ್ರೇಲ್ ಪ್ರವಾಸದ ಕೊನೆಯ ದಿನವಾದ ಬುಧವಾರ ಇಸ್ರೇಲ್ ಸಂಸತ್ತು ನೆಸ್ಸೆಟ್ನ್ನು ಉದ್ದೇಶಿಸಿ ಮಾತನಾಡಿದರು.
ಅವರು ಕಾರ್ಗಿಲ್ ಯುದ್ಧದ ಸಂದರ್ಭ ಭಾರತಕ್ಕೆ ಇಸ್ರೇಲ್ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಕೋರಿದರು. ಕಾರ್ಗಿಲ್ ಬಳಿಕ ಎರಡು ರಾಷ್ಟ್ರಗಳ ನಡುವೆ ಧನಾತ್ಮಕ ಸಂಬಂಧ ಬೆಳೆದಿದೆ ಎಂದು ಅವರು ಹೇಳಿದ್ದಾರೆ. ಈ ನಡುವೆ ಪ್ಯಾಲೆಸ್ಟೇನ್ನ ಅಲ್ ಕುಡ್ಸ್ ವಿಶ್ವವಿದ್ಯಾಲದಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ಅವರು ಎಲ್ಲೂ ಉಲ್ಲೇಖಿಸಿಲ್ಲ.
ಭಾರತ ಇಸ್ರೇಲ್ನ್ನು ಬಯಸುತ್ತದೆ. ಇಸ್ರೇಲ್ನ ಬೆಂಬಲವಿಲ್ಲದೇ ಭಾರತದಲ್ಲಿ ಹಾಲು ಮತ್ತಿತರ ಉತ್ಪಾದನೆ, ಕೃಷಿ, ಕ್ರಾಂತಿಕಾರಿ ಬದಲಾವಣೆ ನಡೆಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಮೋದಿ ಅವರು ತಮ್ಮ ಇಸ್ರೇಲ್ ಭೇಟಿ ಸಂದರ್ಭ ಹೇಳಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
ಇಸ್ರೇಲ್ ಭಯೋತ್ಫದನೆಯನ್ನು ಎದುರಿಸುತ್ತಿದೆ. ಆದರೆ ಅದು ಶೀಘ್ರವೇ ಮೇಲುಗೈ ಸಾಧಿಸಲಿದೆ. ಪ್ಯಾಲೆಸ್ಟೇನ್ ಇಸ್ರೇಲ್ ರಾಷ್ಟ್ರವನ್ನು ಗುರುತಿಸಿ ಹೊಂದಾಣಿಕೆ ಮಾಡಬೇಕಿದೆ ಎಂದು ನೇತನ್ಯಾಹು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.