ನವದೆಹಲಿ: ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಈಗ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. “ರಾಂಚಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಡಿಯೋ ಲಿಂಕ್ ಮೂಲಕ ಉಪನ್ಯಾಸ ನೀಡುವಾಗ ನಮಗೆ ಅಡಚಣೆ ಉಂಟು ಮಾಡಲಾಗಿದೆ. ನಮ್ಮ ವಿಡಿಯೋ ಲಿಂಕ್ ಅನ್ನು ಹ್ಯಾಕ್ ಮಾಡಿ ಪೋರ್ನ್ ಪ್ಲೇ ಮಾಡಲಾಗಿದೆ” ಎಂದು ಸ್ಯಾಮ್ ಪಿತ್ರೋಡಾ ಅವರು ಆರೋಪಿ ಮಾಡಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ ರಾಂಚಿಯಲ್ಲಿ ಯಾವುದೇ ಐಐಟಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಜಾರ್ಖಂಡ್ ರಾಜಧಾನಿಯಲ್ಲಿ ಐಐಟಿ ಇಲ್ಲ ಎಂದು ಶಿಕ್ಷಣ ಸಚಿವಾಲಯ ಬುಧವಾರ ತೀಕ್ಷ್ಣವಾದ ಹೇಳಿಕೆ ನೀಡಿದೆ. ಆದರೆ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಇದೆ ಎಂದು ಸಚಿವಾಲಯ ತಿಳಿಸಿದೆ.
ಆದರೆ ಐಐಐಟಿ ರಾಂಚಿಯಲ್ಲಿ ಪಿತ್ರೋಡಾ ಅವರನ್ನು ವೈಯಕ್ತಿಕವಾಗಿ ಅಥವಾ ವೀಡಿಯೊ ಲಿಂಕ್ ಮೂಲಕ ಯಾವುದೇ ಉಪನ್ಯಾಸ ನೀಡಲು ಆಹ್ವಾನಿಸಿದ ಬಗ್ಗೆ ಯಾವುದೇ ದಾಖಲೆಯಿಲ್ಲ ಎಂದು ಸಚಿವಾಲಯ ಹೇಳಿದೆ. ಅಲ್ಲದೇ ಹ್ಯಾಕಿಂಗ್ ಬಗೆಗಿನ ಹೇಳಿಕೆಯನ್ನು “ಆಧಾರರಹಿತ ಮತ್ತು ಅಜಾಗರೂಕ ಹೇಳಿಕೆ. ಅತ್ಯಂತ ಪ್ರತಿಷ್ಠಿತ ಸಂಸ್ಥೆಯ ಪ್ರತಿಷ್ಠೆಯನ್ನು ಕೆಡಿಸಲು ಮಾಡಿದ ತಂತ್ರ” ಎಂದು ಹೇಳಿದೆ.
ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯನ್ನು ಖಂಡಿಸುವುದಾಗಿ ಮತ್ತು ಪ್ರಮುಖ ಐಐಟಿ ಸಂಸ್ಥೆಗಳ ಪ್ರತಿಷ್ಠೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವೂ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.
ಕಳೆದ ವಾಋ ಚೀನಾ ಭಾರತದ ಶತ್ರುವಲ್ಲ ಎಂಬ ಹೇಳಿಕೆ ನೀಡಿ ಸ್ಯಾಮ್ ಪಿತ್ರೋಡಾ ಸುದ್ದಿಯಲ್ಲಿದ್ದರು.
Clarification on the recent remarks made by Shri Sam Pitroda in his webcast
It has come to the notice that Shri Sam Pitroda shared a video on his “X” handle on 22nd Feb 2025. He made a statement in that video that he was speaking at the IIT Ranchi to several hundred students,…
— Ministry of Education (@EduMinOfIndia) February 26, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.