ನವದೆಹಲಿ: ಮುಂಬೈ ದಾಳಿಯ ಅಪರಾಧಿ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಲು ಯುಎಸ್ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ಮಾರಕ ಭಯೋತ್ಪಾದಕ ದಾಳಿಗಳಲ್ಲಿ ಒಂದೆಂದು ಪರಿಗಣಿಸಲಾದ ಮುಂಬಯಿ ದಾಳಿಯ ಪ್ರಮುಖ ಆರೋಪಿಯನ್ನು ಭಾರತಕ್ಕೆ ಮರಳಿ ಕರೆತರಲು ಇದ್ದ ಅಡೆತಡೆಗಳು ಈ ನಿವಾರಣೆಯಾಗಿದೆ.
2008 ರ ಭಯೋತ್ಪಾದಕ ದಾಳಿಗಳು ದೇಶದ ಆರ್ಥಿಕ ರಾಜಧಾನಿ ಮುಂಬೈಯನ್ನು ಬೆಚ್ಚಿಬೀಳಿಸಿತ್ತು. ನಿಷೇಧಿತ ಸಂಘಟನೆಯಾದ ಲಷ್ಕರ್-ಎ-ತೈಬಾ (ಎಲ್ಇಟಿ) ನಡೆಸಿದ ದಾಳಿಯಲ್ಲಿ ಕನಿಷ್ಠ 166 ಜನರು ಸಾವನ್ನಪ್ಪಿದ್ದಾರೆ.
ಜೀವಂತವಾಗಿ ಸಿಕ್ಕಿಬಿದ್ದ ಏಕೈಕ ದಾಳಿಕೋರ ಅಜ್ಮಲ್ ಕಸಬ್, ಈ ಪ್ರಕರಣದಲ್ಲಿ ಗಲ್ಲಿಗೇರಿಸಲ್ಪಟ್ಟ ಏಕೈಕ ಅಪರಾಧಿ. ಇನ್ನೂ ಇಬ್ಬರು ಮಾಸ್ಟರ್ಮೈಂಡ್ಗಳನ್ನು ನ್ಯಾಯಂಗಕ್ಕೆ ತರಬೇಕಾಗಿದೆ, ಅವರಲ್ಲಿ ರಾಣಾ ಕೂಡ ಒಬ್ಬ.
ಇನ್ನೊಬ್ಬ ಸಯೀದ್ ಜಬಿಯುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್, ಲಷ್ಕರ್ ಭಯೋತ್ಪಾದಕ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಯಕರ್ತ. ಕಸಬ್ ಗುರುತಿಸಿದ ನಂತರ ಅವನನ್ನು 2012 ರಲ್ಲಿ ಬಂಧಿಸಲಾಯಿತು ಮತ್ತು ಪ್ರಸ್ತುತ ಮುಂಬೈನಲ್ಲಿ ಜೈಲಿನಲ್ಲಿ ಇರಿಸಲಾಗಿದೆ.
ತಹವ್ವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಾದ ಪ್ರಜೆ, ಈ ಹಿಂದೆ ಪಾಕಿಸ್ತಾನ ಸೇನೆಯಲ್ಲಿ ವೈದ್ಯನಾಗಿ ಕೆಲಸ ಮಾಡಿದ್ದ. ಅವನಿಗೆ ದಾಳಿಗಳ ಬಗ್ಗೆ ಮೊದಲೇ ತಿಳಿದಿತ್ತು, ಮತ್ತು 2011 ರಲ್ಲಿ ಲಷ್ಕರ್ಗೆ ಸಹಾಯ ಮಾಡಿದ್ದಕ್ಕಾಗಿ ಫೆಡರಲ್ ನ್ಯಾಯಾಧೀಶರು ಅವನನ್ನು ದೋಷಿ ಎಂದು ತೀರ್ಪು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.