ಮುಂಬಯಿ: ಆಟೋ ಚಾಲಕನೊಬ್ಬ ನೀಡಿದ ಮಾಹಿತಿಯ ಮೇರೆಗೆ ಮುಂಬಯಿ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ, ಮೂವರು ಮಲೇಷ್ಯಾದ ಮೂಲದ ಉಗ್ರರು ಮುಂಬಯಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಯೋನ್ ಫ್ಲೈಓವರ್ ಸಮೀಪ ಆಟೋ ಹತ್ತಿದ ಮೂರು ಮಂದಿ ಮಲೇಷ್ಯಾ ಭಾಷೆಯಲ್ಲಿ ತಮ್ಮ ದಾಳಿಯ ಯೋಜನೆಯ ಬಗ್ಗೆ ಮತನಾಡುತ್ತಿದ್ದರು, ನಿರಂತರವಾಗಿ ಫೋನಿನ ಮೂಲಕ ಸಂಭಾಷಣೆಯಲ್ಲಿ ತೊಡಗಿದ್ದರು. ಇನ್ನೊಬ್ಬ ವ್ಯಕ್ತಿಗೆ ಮಲೇಷ್ಯಾ ಬರುತ್ತಿರಲಿಲ್ಲ ಆತ ಉರ್ದು ಮಿಶ್ರಿತ ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿದ್ದ ಎಂದು ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಆಟೋ ಚಾಲಕ ನಾಲ್ಕು ವರ್ಷ ಮಲೇಷ್ಯಾದಲ್ಲಿ ಇದ್ದ ಕಾರಣ ಆತನಿಗೆ ಅವರಿಬ್ಬರ ಮಾತುಗಳು ಅರ್ಥವಾಗಿದೆ, ಈ ಹಿನ್ನಲೆಯಲ್ಲಿ ಆತ ಇವರ ಬಗೆಗಿನ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾನೆ. ಐರೋಲಿ ಟೋಲ್ ನಾಕಾ ಸಮೀಪ ಅವರನ್ನು ಕೆಳಗಿಳಿಸಿದ್ದಾಗಿ ಆತ ಹೇಳಿದ್ದಾನೆ.
ಪೊಲೀಸರಿಗೆ ಇತರ ಮೂಲದದಿಂದಲೂ ಈ ಬಗ್ಗೆ ಮಾಹಿತಿ ದೊರೆತಿದೆ. ಮಂಗಳವಾರ ಮುಂಬಯಿಗೆ ಪ್ರಧಾನಿ ನರೇಂದ್ರ ಮೋದಿಯವರೂ ಆಗಮಿಸುತ್ತಿರುವ ಹಿನ್ನಲೆಯಲ್ಲಿ ದಾಳಿಗೆ ಸಂಚು ರೂಪಿಸಲಾಗಿದೆ ಎನ್ನಲಾಗಿದೆ.
ಹೀಗಾಗೀ ಪೊಲೀಸರು ಹೈಅಲರ್ಟ್ ಘೋಷಿಸಿದ್ದು, ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.