ಅಹಮದಾಬಾದ್: ಮಕರ ಸಂಕ್ರಾಂತಿ ಆಚರಣೆಯ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಗುಜರಾತ್ನ ಅಹಮದಾಬಾದ್ನಲ್ಲಿ ಗಾಳಿಪಟ ಹಾರಿಸುವ ಮೂಲಕ ತಮ್ಮ ವಾರ್ಷಿಕ ಆಚರಣೆಯನ್ನು ಮುಂದುವರೆಸಿದರು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಈ ವೇಳೆ ಶಾ ಜೊತೆಗಿದ್ದರು ಮತ್ತು ಇಬ್ಬರೂ ಅಹಮದಾಬಾದ್ನ ಶಾಂತಿನಿಕೇತನ ಸೊಸೈಟಿಯ ಕಟ್ಟಡವೊಂದರ ಮೇಲ್ಛಾವಣಿಯಿಂದ ಗಾಳಿಪಟ ಹಾರಿಸಿ ಆನಂದಿದರು.
ದೇಶಾದ್ಯಂತ ಪ್ರತಿ ವರ್ಷ ಜನವರಿ 14 ರಂದು ಆಚರಿಸಲಾಗುವ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಗುಜರಾತಿನಲ್ಲಿ ಒಂದು ಕಡ್ಡಾಯ ಸಂಪ್ರದಾಯವಾಗಿದೆ.
ಶಾ ಅವರನ್ನು ನೋಡಲು ಹತ್ತಿರದ ಕಟ್ಟಡಗಳ ಮೇಲೆ ಜನಸಮೂಹ ಸೇರಿದ್ದರು. ಅವರ ಆಗಮನದ ಹಿನ್ನೆಲೆಯಲ್ಲಿ ಸೊಸೈಟಿಯ ಸದಸ್ಯರು ಸುಂದರ ಮತ್ತು ವರ್ಣರಂಜಿತ ಗಾಳಿಪಟಗಳು ಮತ್ತು ರಂಗೋಲಿಯಿಂದ ಇಡೀ ಆವರಣವನ್ನು ಅಲಂಕರಿಸಿದರು. ಆತ್ಮೀಯ ಸ್ವಾಗತಕ್ಕಾಗಿ ಸೊಸೈಟಿ ಸದಸ್ಯರಿಗೆ ಧನ್ಯವಾದಗಳು ಎಂದು ಶಾ ಹೇಳಿದ್ದಾರೆ.
#WATCH | Union Home Minister Amit Shah and Gujarat CM Bhupendra Patel celebrate Makar Sankranti in Ahmedabad pic.twitter.com/NSZiLAkn5T
— ANI (@ANI) January 14, 2025
#WATCH | Union Home Minister Amit Shah and Gujarat CM Bhupendra Patel celebrate Makar Sankranti in Ahmedabad pic.twitter.com/NSZiLAkn5T
— ANI (@ANI) January 14, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.