ಜೆಹನನ್ಬಾದ್ : ಬಿಹಾರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಮೈತ್ರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
’ಬಿಜೆಪಿಯ ಎಲ್ಲಾ ನಾಯಕರು ಬಿಹಾರದ ಅಭಿವೃದ್ಧಿಗಾಗಿ ನಮಗೆ ಮತ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದು ನಮ್ಮ ಏಕೈಕ ಅಜೆಂಡಾ ಆದರೆ ಮಹಾಮೈತ್ರಿ ನಾಯಕರು ’ಮೋದಿ ವಿನಾಶಕ್ಕಾಗಿ’ ಮನಗೆ ಮತ ನೀಡಿ ಎನ್ನುತ್ತಿದ್ದಾರೆ. ಅದು ಅವರ ಏಕೈಕ ಅಜೆಂಡಾ’ ಎಂದು ಹರಿಹಾಯ್ದರು.
’ಮೋದಿಯ ವಿನಾಶ ಅವರ ಚುನಾವಣಾ ವಿಷಯ. ದಿನಾಲೂ ಇದನ್ನೇ ಹೇಳುತ್ತಾರೆ, ಅದರಲ್ಲೂ ಒಬ್ಬ ನಾಯಕನಂತು ಬಿಹಾರ ಚುನಾವಣೆ ಮುಗಿಯಲಿ ಮೋದಿಯನ್ನು ದೆಹಲಿಯಿಂದಲೇ ಫಿನಿಶ್ ಮಾಡುತ್ತೇವೆ ಎಂದಿದ್ದಾರೆ. ಪ್ರಜಾಪ್ರಭುತ್ವ ಒಬ್ಬರ ವಿನಾಶವನ್ನು ಮಾಡಲಿಕ್ಕಿರುವುದಲ್ಲ, ಜನರ ಆಶೋತ್ತರಗಳು ಈಡೇರಿದೆಯೇ ಎಂದು ನೋಡಿಕೊಳ್ಳಲು ಇರುವುದು’ ಎಂದರು.
’30 ವರ್ಷಗಳ ಬಳಿಕ ಕೇಂದ್ರದೊಂದಿಗೆ ಸ್ನೇಹಯುತವಾಗಿರುವ ಸರ್ಕಾರಕ್ಕೆ ಬಿಹಾರದ ಜನ ಮತ ಹಾಕಲು ಮನಸ್ಸು ಮಾಡಿದ್ದಾರೆ. ದೆಹಲಿ ಮತ್ತು ಬಿಹಾರ ಎರಡಕ್ಕೂ ಉತ್ತರದಾಯಿಯಾಗಿರುವ ಸರ್ಕಾರಕ್ಕೆ ಮತ ಹಾಕಲು ಜನ ನಿರ್ಧರಿಸಿದ್ದಾರೆ. ರೋಡ್ಬ್ಲಾಕ್ ಮಾಡುವ ಸರ್ಕಾರವೇ ಇಲ್ಲಿ ಇದ್ದರೆ ನಾನೆಷ್ಟು ಪ್ರಯತ್ನಿಸಿದರೂ ಬಿಹಾರವನ್ನು ಉದ್ಧಾರ ಮಾಡಲು ಸಾಧ್ಯವಾಗದು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.