ಮುಂಬೈ: ಭಾರತವು ದಕ್ಷಿಣ ಆಫ್ರಿಕಾದ ರಾಷ್ಟ್ರವಾದ ಲೆಸೊಥೊಗೆ ಮಾನವೀಯ ನೆರವು ಹೊಂದಿದ ಸರಕುಗಳನ್ನು ಕಳುಹಿಸಿದ್ದು, ಇದು ಆ ದೇಶದಲ್ಲಿನ ಆಹಾರ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲಿದೆ. ಈ ಸರಕು 1000 ಮೆಟ್ರಿಕ್ ಟನ್ ಜೋಳವನ್ನು ಒಳಗೊಂಡಿದೆ.
ಇದು ಸೋಮವಾರ ಮುಂಬೈನ ನ್ವಾ ಶೇವಾ ಬಂದರಿನಿಂದ ಸರಕು ಹೊರಟಿದೆ. ಇದು ಭಾರತದಿಂದ ಲೆಸೊಥೊಗೆ ಆಹಾರ ಧಾನ್ಯವನ್ನು ಒಳಗೊಂಡ ನೆರವಿನ ಎರಡನೇ ಕಂತಾಗಿದೆ.
“ಭಾರತ ಮತ್ತು ಲೆಸೊಥೊ ಜಾಗತಿಕ ದಕ್ಷಿಣ ಪಾಲುದಾರ ರಾಷ್ಟ್ರಗಳಾಗಿದ್ದು, ಕಷ್ಟದಲ್ಲಿ ಒಗ್ಗಟ್ಟಾಗಿ ನಿಂತಿವೆ. ಭಾರತವು ಲೆಸೊಥೊ ಜನರಿಗೆ ಎರಡನೇ ಕಂತಿನ ಆಹಾರ ಧಾನ್ಯ ಸಹಾಯವನ್ನು ಕಳುಹಿಸುತ್ತದೆ. ಈ ನೆರವು ಲೆಸೊಥೊಗೆ ಆಹಾರ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. 1000 ಮೆಟ್ರಿಕ್ ಟನ್ ಜೋಳ ಹೊಂದಿದ ಸರಕುಗಳು ಇಂದು ಮುಂಬೈನ ನ್ವಾ ಶೇವಾ ಬಂದರಿನಿಂದ ಲೆಸೊಥೊಗೆ ಹೊರಟವು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ X ನಲ್ಲಿ ಬರೆದಿದ್ದಾರೆ.
ಡಿಸೆಂಬರ್ ಆರಂಭದಲ್ಲಿ, ಭಾರತವು ಲೆಸೊಥೊದಲ್ಲಿನ ಜನರ ಆಹಾರ ಭದ್ರತೆ ಮತ್ತು ಪೌಷ್ಠಿಕಾಂಶದ ಅಗತ್ಯಗಳನ್ನು ಪೂರೈಸಲು 1000 ಮೆಟ್ರಿಕ್ ಟನ್ ಅಕ್ಕಿಯನ್ನು ಒಳಗೊಂಡಿರುವ ಮಾನವೀಯ ನೆರವು ಸರಕನ್ನು ಆ ರಾಷ್ಟ್ರಕ್ಕೆ ಕಳುಹಿಸಿತ್ತು.
India & Lesotho: Global South partners in solidarity with each other.
🇮🇳 sends the second tranche of foodgrain assistance for the people of Lesotho. This assistance will help 🇱🇸 to address the food security issues.
A consignment of 1000MT of Sorghum departed today from Nhava… pic.twitter.com/xxVb2CxyJ4
— Randhir Jaiswal (@MEAIndia) January 13, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.