ಮಂಗಳೂರು: ಭಾರತ್ ಫೌಂಡೇಶನ್ ವತಿಯಿಂದ ಆಯೋಜಿಸಲ್ಪಡುತ್ತಿರುವ ಮಂಗಳೂರು ಸಾಹಿತ್ಯೋತ್ಸವ 7ನೇ ಆವೃತ್ತಿ ನಗರದ ಟಿಎಂಎ ಪೈ ಕನ್ವೆನ್ಶಲ್ ಹಾಲ್ನಲ್ಲಿ ಜನವರಿ 11 ಮತ್ತು 12 ರಂದು ಜರುಗಲಿದ್ದು, ನಾಡಿನ ಖ್ಯಾತ ಸಾಹಿತಿಗಳಾದ ಎಸ್.ಎಲ್ ಭೈರಪ್ಪ, ಶತವಧಾನಿ ಡಾ. ಆರ್ ಗಣೇಶ್ ಅವರಿಂದ ಉದ್ಘಾಟನೆಗೊಳ್ಳಲಿದೆ.
ʼಐಡಿಯಾ ಆಫ್ ಭಾರತ್ʼ ವಿಷಯದೊಂದಿಗೆ ಅತ್ಯಂತ ವಿಶಿಷ್ಟವಾಗಿ ಮೂಡಿ ಬರುವ ಈ ಸಾಹಿತ್ಯ ಹಬ್ಬದಲ್ಲಿ ಪ್ರತಿ ವರ್ಷ ಬೇರೆ ಬೇರೆ ಕ್ಷೇತ್ರಗಳಲ್ಲಿ ತಜ್ಞತೆ ಹೊಂದಿದ ಗಣ್ಯರು ದೇಶದ ಗಂಭೀರ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾ ಬಂದಿದ್ದಾರೆ. ಸಾಹಿತ್ಯ ಮಾತ್ರವಲ್ಲದೇ ಸಿನಿಮಾ ರಂಗದಿಂದ ಹಿಡಿದು ದೇಶದ ರಕ್ಷಣೆವರೆಗೆ ಎಲ್ಲಾ ರಂಗದ ವಿಚಾರಗಳೂ ಇಲ್ಲಿ ಚರ್ಚೆಗೆ ಬಂದಿವೆ.
ಅದರಂತೆಯೇ ಈ ಬಾರಿಯ ಸಾಹಿತೋತ್ಸವದಲ್ಲೂ ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್, ಭಾರತದ ಮಾಜಿ ರಾಜತಾಂತ್ರಿಕ ಮತ್ತು ಲೇಖಕ ದಿಲೀಪ್ ಸಿನ್ಹಾ, ಲೇಖಕ ಅರುಣ್ ಭಾರಧ್ವಜ್, ಇತಿಹಾಸಕಾರ ಮತ್ತು ಲೇಖಕ ವಿಕ್ರಮ್ ಸಂಪತ್, ಜೆಎನ್ಯು ಉಪ ಕುಲಪತಿ ಸಾಂತಿಶ್ರೀ ದುಲಿಪುಡಿ ಪಂಡಿತ್ ಮುಂತಾದ ಗಣ್ಯರು ಭಾಗಿಯಾಗಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
ಮೊದಲ ಆವೃತ್ತಿಯಿಂದಲೂ ಪುಸ್ತಕ ಮಳಿಗೆ ಲಿಟ್ ಫೆಸ್ಟ್ನ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. ಓದುಗರಿಗೆ ತಮ್ಮ ನೆಚ್ಚಿನ ಪುಸ್ತಕ ಖರೀದಿಸಲು ಇದೊಂದು ಪ್ರಮುಖ ಸಂದರ್ಭವೂ ಆಗಿದೆ. ಇದರ ಜೊತೆಗೆ ಸಾಂಸ್ಕೃತಿಕ ಕಲೆಯ ಪ್ರದರ್ಶನಕ್ಕೂ ಲಿಟ್ ಫೆಸ್ಟ್ ವೇದಿಕೆಯಾಗಿ ಹೊರಹೊಮ್ಮಿದೆ. ಮಾತ್ರವಲ್ಲದೇ ಮಂಗಳೂರು ಲಿಟ್ ಫೆಸ್ಟ್ಗೆ ಪ್ರತಿವರ್ಷ ಅಪಾರ ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ. ಅತಿ ಹೆಚ್ಚು ಜನರನ್ನು ಸೆಳೆಯುವ ಸಾಹಿತ್ಯ ಹಬ್ಬವೆಂಬ ಹೆಗ್ಗಳಿಕೆಯನ್ನೂ ಇದು ಪಡೆದಿದೆ.
Yes !!! Mangaluru Literature Festival is back.
We are excited to announce the dates for the 7th edition of Mangaluru Lit Fest which will be held on Jan 11th & 12th, 2025.
Stay tuned for more updates #MlrLitFest pic.twitter.com/dL1hX7bzS7
— Mangaluru Lit Fest (@mlrlitfest) June 15, 2024
ತಮ್ಮ ಹಲವಾರು ಚಲನಚಿತ್ರಗಳಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಜನಪ್ರಿಯ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಅವರು ನಮ್ಮೆಲ್ಲರೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ಮಂಗಳೂರು ಲಿಟ್ ಫೆಸ್ಟ್ನ 7 ನೇ ಆವೃತ್ತಿಗೆ ಆಗಮಿಸುತ್ತಿದ್ದಾರೆ.#MlrLitFest pic.twitter.com/VaB9h6rBkH
— Mangaluru Lit Fest (@mlrlitfest) January 7, 2025
Dr R Balasubramaniam’s book “Power Within” to be Released at the 7th Edition of Mangaluru Lit Fest@drrbalu #MlrLitFest pic.twitter.com/HeP0uIun44
— Mangaluru Lit Fest (@mlrlitfest) January 7, 2025
Udaya Raaga: A soul-stirring violin recital by Sreejith Saralaya at #MlrLitfest 7th Edition — experience the magic of music at dawn pic.twitter.com/KAKqSOAjF1
— Mangaluru Lit Fest (@mlrlitfest) January 7, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.