ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕದ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಜಟಾಪಟಿಯ ನಡುವೆಯೇ 2020 ರಲ್ಲಿ ನಿಧನರಾದ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕಕ್ಕಾಗಿ ಮೋದಿ ಸರ್ಕಾರವು ಸ್ಥಳವನ್ನು ಹಂಚಿಕೆ ಮಾಡಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಅವರಿಗೆ ಬರೆದ ಪತ್ರದಲ್ಲಿ, ರಾಜ್ಘಾಟ್ ಆವರಣದಲ್ಲಿ ಮಾಜಿ ರಾಷ್ಟ್ರಪತಿಯವರ ಸ್ಮಾರಕಕ್ಕಾಗಿ ಒಂದು ಸ್ಥಳವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದೆ.
“ದಿವಂಗತ ಪ್ರಣಬ್ ಮುಖರ್ಜಿಯವರ ಸಮಾಧಿಗಾಗಿ ರಾಷ್ಟ್ರೀಯ ಸ್ಮೃತಿ ಸಂಕೀರ್ಣದಲ್ಲಿ (ರಾಜ್ಘಾಟ್ ಆವರಣದ ಒಂದು ಭಾಗ) ಗೊತ್ತುಪಡಿಸಿದ ನಿವೇಶನವನ್ನು ಮೀಸಲಿಡಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದೆ” ಎಂದು ಜನವರಿ 1 ರ ಪತ್ರದಲ್ಲಿ ತಿಳಿಸಲಾಗಿದೆ.
ಈ ನಿರ್ಧಾರಕ್ಕಾಗಿ ಮಾಜಿ ಕಾಂಗ್ರೆಸ್ ನಾಯಕಿ ಶರ್ಮಿಷ್ಠಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು. “ಬಾಬಾ ಅವರ ಸ್ಮಾರಕವನ್ನು ರಚಿಸುವ ಸರ್ಕಾರದ ನಿರ್ಧಾರಕ್ಕೆ ನನ್ನ ಹೃದಯಾಂತರಾಳದಿಂದ ಧನ್ಯವಾದ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಲು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದೆ. ನಾವು ಸ್ಮಾರಕಕ್ಕಾಗಿ ಸ್ಥಳ ಕೇಳಲಿಲ್ಲ. ಪ್ರಧಾನಿಯವರ ಈ ನಿರ್ಧಾರ ಅನಿರೀಕ್ಷಿತ ಮತ್ತು ನಮ್ಮ ಮನಸ್ಸನ್ನು ತಟ್ಟಿದೆ” ಎಂದು ಶರ್ಮಿಷ್ಠಾ ಎಕ್ಸ್ನಲ್ಲಿ ಬರೆದಿದ್ದಾರೆ.
“ಸರ್ಕಾರದಿಂದ ಗೌರವಗಳನ್ನು ಕೇಳಬಾರದು, ಇವುಗಳು ತಾನಾಗಿಯೇ ಒಲಿದು ಬರಬೇಕು ಎಂದು ಬಾಬಾ ಹೇಳುತ್ತಿದ್ದರು” ಎಂದು ಶರ್ಮಿಷ್ಠಾ ಹೇಳಿದ್ದಾರೆ.
ಬಾಬಾರ ಸ್ಮರಣೆಗಾಗಿ ಪ್ರಧಾನಿ ಮೋದಿಯವರು ಈ ನಿರ್ಧಾರ ಮಾಡಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರಣವ್ ಮಗಳಾಗಿ ನನ್ನ ಸಂತೋಷವನ್ನು ವ್ಯಕ್ತಪಡಿಸಲು ಪದಗಳು ಸಾಕಾಗುವುದಿಲ್ಲ” ಎಂದು ಶರ್ಮಿಷ್ಠಾ ಹೇಳಿದ್ದಾರೆ.
Called on Hon’ble PM @narendramodi ji to express thanks & gratitude from core of my heart 4 his govts’ decision 2 create a memorial 4 baba. It’s more cherished considering that we didn’t ask for it. Immensely touched by this unexpected but truly gracious gesture by PM🙏 1/2 pic.twitter.com/IRHON7r5Tk
— Sharmistha Mukherjee (@Sharmistha_GK) January 7, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.