ನವದೆಹಲಿ: ಶುಕ್ರವಾರ ಬಿಡುಗಡೆಯಾದ ಎಸ್ಬಿಐ ರಿಸರ್ಚ್ ಅಧ್ಯಯನದ ಪ್ರಕಾರ, ವಿತ್ತವರ್ಷ 24 ರ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಡತನದ ಪ್ರಮಾಣವು ಮೊದಲ ಬಾರಿಗೆ ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ. ಎಫ್ವೈ 23 ರಲ್ಲಿ ಶೇಕಡಾ 7.2 ರಿಂದ 24 ರಲ್ಲಿ ಶೇಕಡಾ 4.86 ಕ್ಕೆ ಇಳಿದಿದೆ.
ಇದೇ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಬಡತನದ ಅನುಪಾತವು 4.6 ಶೇಕಡಾದಿಂದ 4.09 ಶೇಕಡಾಕ್ಕೆ ಇಳಿದಿದೆ.
2011-12ರಲ್ಲಿ ಶೇ.25.7ರಷ್ಟಿದ್ದ ಗ್ರಾಮೀಣ ಬಡತನ 2024ರ ಮಾರ್ಚ್ ವೇಳೆಗೆ ಕೇವಲ ಶೇ.4.86ಕ್ಕೆ ಇಳಿದಿದೆ. ಹೀಗೆ ಬಡತನ ಪ್ರಮಾಣ ಶೇ.5ಕ್ಕಿಂತ ಕೆಳಗೆ ಇಳಿದಿದ್ದು ಇದೇ ಮೊದಲು ಎಂದು ವರದಿ ಹೇಳಿದೆ.
ಎಸ್ಬಿಐನ ಬಳಕೆ ವೆಚ್ಚ ವರದಿ ಅನ್ವಯ, 2011-12ರಲ್ಲಿ ನಗರ ಪ್ರದೇಶಗಳ ಬಡತನ ಶೇ.13.7ರಷ್ಟು ಇದ್ದಿದ್ದು 2024ರ ಮಾರ್ಚ್ ವೇಳೆಗೆ ಶೇ.4.09ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಬಡತನ ಶೇ.25.7ರಿಂದ ಶೇ.4.86ಕ್ಕೆ ಇಳಿದಿದೆ. ಒಟ್ಟಾರೆಯಾಗಿ ನೋಡಿದರೆ ಭಾರತದಲ್ಲಿ ಬಡತನ ಪ್ರಮಾಣ ಶೇ.4-4.5ರಷ್ಟಿದೆ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.