ಮುಂಬಯಿ: ಸುಧೀಂದ್ರ ಕುಲಕರ್ಣಿ ಅವರ ಮೇಲೆ ಪೇಯಿಂಟ್ ದಾಳಿ ನಡೆಸಿದ ತನ್ನ ಕೃತ್ಯವನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ನಾವು ಎರೆಚಿದ್ದು, ಪೇಯಿಂಟ್ ಅಲ್ಲ, ನಮ್ಮ ಸೈನಿಕರ ರಕ್ತ ಎಂದು ಹೇಳಿಕೊಂಡಿದೆ.
‘ಇದೊಂದು ಸಾಫ್ಟ್ ಅಟ್ಯಾಕ್, ಪಾಕಿಸ್ಥಾನಕ್ಕೆ ಗೌರವಕೊಡುವ ಕ್ರಮಗಳು ಈ ದೇಶದಲ್ಲಿ ನಡೆಯುವ ತನಕ ಇಂತಹ ದಾಳಿಗಳು ನಡೆಯುತ್ತಲೇ ಇರುತ್ತದೆ. ಇದು ಇಂಕ್ ಅಲ್ಲ, ನಮ್ಮ ಸೈನಿಕರ ರಕ್ತ. ಕುಲಕರ್ಣಿ ಇದೊಂದು ಸಾಫ್ಟ್ ಪ್ರತಿಕ್ರಿಯೆ’ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನೆಯ ಬೆದರಿಕೆಯ ನಡುವೆಯೂ ಕುಲಕಣಿ ಪಾಕಿಸ್ಥಾನದ ಮಾಜಿ ಸಚಿವ ಕುರ್ಷಿದ್ ಮೊಹಮ್ಮದ್ ಕಸುರಿಯವರ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ.
ಕುಲಕರ್ಣಿ ಅವರ ಮೇಲೆ ನಡೆದ ದಾಳಿಗೆ ಕಸುರಿಯವರೂ ಬೇಸರವ್ಯಕ್ತಪಡಿಸಿದ್ದು, ಭಾರತದೊಂದಿಗೆ ಶಾಂತಿ ಸ್ಥಾಪನೆ ಮಾಡಬೇಕೆಂಬುದು ನನ್ನ ಆಶಯ ಎಂದಿದ್ದಾರೆ.
ಇದೀಗ ಪೇಯಿಂಟ್ ದಾಳಿ ಮಾಡಿದ ಶಿವಸೇನೆಯ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಅಲ್ಲದೇ ಶಿವಸೇನೆ ಫ್ಯಾಸಿಸ್ಟ್ ಮತ್ತು ದೇಶೀ ತಾಲಿಬಾನ್ನ ಪ್ರತಿರೂಪವಾಗಿದೆ ಎಂಬ ಆರೋಪಗಳು ಕೇಲಿ ಬರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.