ಇಂಪಾಲ: ಮೇ 2023 ರಲ್ಲಿ ಸಂಘರ್ಷ ಸ್ಫೋಟಗೊಂಡಾಗಿನಿಂದ 200 ಕ್ಕೂ ಹೆಚ್ಚು ಜನರನ್ನು ಬಲಿಪಡೆದ ಮತ್ತು ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸಾಮಾಜಿಕ ಮಾಧ್ಯಮದ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ ಮತ್ತು ಹೊಸ ವರ್ಷದಲ್ಲಿ ಇಂತಹ ಅಹಿತಕರ ಘಟನೆಗಳು ಸಂಬವಿಸುವುದಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಈಶಾನ್ಯ ರಾಜ್ಯದ ಜನರ ಬಳಿ ಬಿರೇನ್ ಸಿಂಗ್ ಕ್ಷಮೆಯಾಚಿಸಿದ ಕುರಿತು ಕುಹಕವಾಡಿರುವ ಕಾಂಗ್ರೆಸ್, ಇದುವರೆಗೆ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಯಾಕೆ ಭೇಟಿ ನೀಡಿಲ್ಲ ಎಂದು ಪ್ರಶ್ನೆ ಮಾಡಿದೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಈ ಪ್ರಶ್ನೆಗೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಬಿರೇನ್ ಸಿಂಗ್, “ಕಾಂಗ್ರೆಸ್ ಮಾಡಿದ ಹಿಂದಿನ ಪಾಪಗಳಿಂದಾಗಿ ಮಣಿಪುರ ರಾಜ್ಯ ಇಂದು ಪ್ರಕ್ಷುಬ್ಧವಾಗಿದೆ” ಎಂದು ಹೇಳಿದರು.
“ನಾನು ಇಂದು ಸಲ್ಲಿಸಿದ ಕ್ಷಮೆಯಾಚನೆಯು ನಿರಾಶ್ರಿತರಾದ ಜನರಿಗಾಗಿ ನನ್ನ ದುಃಖವನ್ನು ವ್ಯಕ್ತಪಡಿಸುವ ಪ್ರಾಮಾಣಿಕ ಕಾರ್ಯವಾಗಿದೆ. ಮುಖ್ಯಮಂತ್ರಿಯಾಗಿ ಕ್ಷಮಿಸಿ ಎಂಬ ಮನವಿಯಾಗಿದೆ, ಆದರೆ ನೀವು ಅದರಲ್ಲಿ ರಾಜಕೀಯವನ್ನು ತಂದಿದ್ದೀರಿ. ಮಣಿಪುರದಲ್ಲಿ 1992 ಮತ್ತು 1997 ರ ನಡುವೆ ಸಂಭವಿಸಿದ ನಾಗಾ-ಕುಕಿ ಘರ್ಷಣೆಯ ಅವಧಿಯು ಈಶಾನ್ಯ ಭಾರತದಲ್ಲಿ ರಕ್ತಸಿಕ್ತ ಜನಾಂಗೀಯ ಸಂಘರ್ಷಗಳಲ್ಲಿ ಒಂದಾಗಿದೆ. ನಾಗಾ-ಕುಕಿ ಘರ್ಷಣೆಗಳು ಸರಿಸುಮಾರು 1,300 ಜನರ ಸಾವಿಗೆ ಕಾರಣವಾಯಿತು ಮತ್ತು ಸಾವಿರಾರು ಜನರು ಸ್ಥಳಾಂತರಗೊಂಡರು. ಹಿಂಸಾಚಾರವು ಹಲವಾರು ವರ್ಷಗಳವರೆಗೆ ಮುಂದುವರೆಯಿತು, 1992 ಮತ್ತು 1997 ರ ನಡುವೆ ಘರ್ಷಣೆ ತೀವ್ರತೆ ಪಡೆಯಿತು, ಆದರೂ ಸಂಘರ್ಷದ ಅತ್ಯಂತ ತೀವ್ರವಾದ ಅವಧಿ 1992– 1993 ರಲ್ಲಿತ್ತು” ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.
“1991 ರಿಂದ 1996 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮತ್ತು ಆ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಿ.ವಿ.ನರಸಿಂಹರಾವ್ ಅವರು ಕ್ಷಮೆಯಾಚಿಸಲು ಮಣಿಪುರಕ್ಕೆ ಬಂದಿದ್ದಾರೆಯೇ? ಕುಕಿ-ಪೈಟ್ ಘರ್ಷಣೆಗಳು ರಾಜ್ಯದಲ್ಲಿ 350 ಜನರನ್ನು ಬಲಿ ತೆಗೆದುಕೊಂಡಿವೆ. ಕುಕಿ-ಪೈಟ್ ಘರ್ಷಣೆಯ ಸಮಯದಲ್ಲಿ (1997-1998), IK ಗುಜ್ರಾಲ್ ಅವರು ಭಾರತದ ಪ್ರಧಾನಿಯಾಗಿದ್ದರು. ಅವರು ಮಣಿಪುರ ಜನರ ಬಳಿ ಕ್ಷಮೆಯಾಚಿಸಿದರೇ?” ಅವರು ಕಾಂಗ್ರೆಸ್ ಅನ್ನು ಬಿರೇನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
#WATCH | Imphal: Manipur CM N Biren Singh says "This entire year has been very unfortunate. I feel regret and I want to say sorry to the people of the state for what is happening till today, since last May 3. Many people lost their loved ones. Many people left their homes. I… pic.twitter.com/tvAxInKPdg
— ANI (@ANI) December 31, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.