ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ ದೆಹಲಿ ವಿಶ್ವವಿದ್ಯಾಲಯದ ವೀರ್ ಸಾವರ್ಕರ್ ಕಾಲೇಜ್ಗೆ ಶಂಕುಸ್ಥಾಪನೆ ಮಾಡಿದರು ಮತ್ತು ದೆಹಲಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ಅಶೋಕ್ ವಿಹಾರ್ನಲ್ಲಿರುವ ಸ್ವಾಭಿಮಾನ್ ಅಪಾರ್ಟ್ಮೆಂಟ್ನಲ್ಲಿ ಇನ್-ಸಿಟು ಸ್ಲಂ ಪುನರ್ವಸತಿ ಯೋಜನೆಯಡಿ “ಜುಗ್ಗಿ ಜೊಪ್ರಿ” (ಜೆಜೆ) ಕ್ಲಸ್ಟರ್ಗಳ ನಿವಾಸಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ ಫ್ಲಾಟ್ಗಳಿಗೆ ಪ್ರಧಾನಿ ಮೋದಿ ಮೊದಲು ಭೇಟಿ ನೀಡಿದರು. ನಂತರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಬಳಿಕ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, 2025 ರ ವರ್ಷ ಭಾರತದ ಅಭಿವೃದ್ಧಿಗಾಗಿ ಅನೇಕ ಸಂಭಾವ್ಯತೆಗಳನ್ನು ಹೊತ್ತು ತರುತ್ತಿದೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವ ನಮ್ಮ ಪಯಣ ಈ ವರ್ಷ ಮತ್ತಷ್ಟು ವೇಗ ಪಡೆಯಲಿದೆ. ಇಂದು ಭಾರತ ವಿಶ್ವದಲ್ಲೇ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಯ ಪ್ರತೀಕವಾಗಿದೆ, 2025 ರಲ್ಲಿ ಭಾರತದ ಪಾತ್ರ ಮತ್ತಷ್ಟು ಬಲಿಷ್ಠವಾಗಲಿದೆ ಎಂದರು.
“ಕಳೆದ 10 ವರ್ಷಗಳಲ್ಲಿ, ದೆಹಲಿಯು ‘ಆಪತ್ತಿ’ ನಿಂದ ಸುತ್ತುವರಿದಿದೆ. ಎಎಪಿಯಿಂದ ದೆಹಲಿಗೆ ವಿಪತ್ತು ಬಂದಿದೆ. ನಾನು ಕೂಡ ಶೇಷ ಮಹಲ್ ಅನ್ನು ಸಹ ನಿರ್ಮಿಸಬಹುದಿತ್ತು, ಆದರೆ ನಾನು 4 ಕೋಟಿಗೂ ಹೆಚ್ಚು ಬಡವರಿಗೆ ಮನೆಗಳನ್ನು ನಿರ್ಮಿಸಲು ನಿರ್ಧರಿಸಿದೆ ಎನ್ನುವ ಮೂಲಕ ಅರವಿಂದ್ ಕೇಜ್ರಿವಾಲ್ಗೆ ಟಾಂಗ್ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.