ನವದೆಹಲಿ: ಉತ್ತರಪ್ರದೇಶದ ದಾದ್ರಿಯಲ್ಲಿ ನಡೆದಂತಹ ಪ್ರಕರಣಗಳು ಬಿಜೆಪಿ-ಎನ್ಡಿಎಗೆ ತೀವ್ರ ಹಾನಿಯನ್ನು ಉಂಟು ಮಾಡುತ್ತದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಂದು ಘಟನೆಗಳನ್ನು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ವೈಭವೀಕರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
‘ದಾದ್ರಿಯಂತಹ ಘಟನೆಗಳು ನಿಜವಾಗಿಯೂ ಬಿಜೆಪಿ ಎನ್ಡಿಎಗೆ ಹಾನಿಯುಂಟು ಮಾಡುತ್ತದೆ. ಅಲ್ಲದೇ ಪ್ರಧಾನಿಯವರ ಅಭಿವೃದ್ಧಿಯ ದೂರದೃಷ್ಟಿತ್ವಕ್ಕೂ ಇದು ಮಾರಕವಾಗಿದೆ. ದೇಶದ ಹಿತಾಸಕ್ತಿಗೂ ಇದು ಒಳಿತಲ್ಲ’ ಎಂದಿದ್ದಾರೆ.
ವಿಷಯಗಳನ್ನು ಮಿತಿಮೀರಿ ಬೆಳೆಸಲು ಕೆಲವೊಂದು ರಾಜಕೀಯ ಹಿತಾಸಕ್ತಿಗಳು ಪ್ರಯತ್ನಿಸುತ್ತದೆ. ಸ್ಥಳೀಯ ವಿಷಯವೊಂದನ್ನು ರಾಷ್ಟ್ರಮಟ್ಟದಲ್ಲಿ ವೈಭವೀಕರಿಸುತ್ತದೆ ಎಂದು ಆರೋಪಿಸಿದರು.
ಗೋಮಾಂಸ ಸಂಗ್ರಹಿಸಿಟ್ಟಿದ್ದ ಎಂದು ಶಂಕಿಸಿ ವ್ಯಕ್ತಿಯೋರ್ವನನ್ನು ದಾದ್ರಿಯಲ್ಲಿ ಗುಂಪೊಂದು ಹತ್ಯೆ ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.