ಕಠ್ಮಂಡು: ಕೆಪಿ ಶರ್ಮಾ ಓಲಿ ಅವರು ನೇಪಾಳದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸಂಸತ್ತು ಚುನಾವಣೆಯಲ್ಲಿ ಸುಶೀಲ್ ಕೊಯಿರಾಲ ಅವರನ್ನು ಸೋಲಿಸಿ ಪ್ರಧಾಣಿ ಹುದ್ದೆಗೆ ಅರ್ಹತೆ ಪಡೆದುಕೊಂಡರು.
ನಡೆದ ಸಂಸತ್ತು ಚುನಾವಣೆಯಲ್ಲಿ ಸಿಪಿಎನ್-ಯುಎಂಎಲ್ ಮುಖ್ಯಸ್ಥ ಓಲಿ ಅವರು ೩೩೮ ಮತ ಪಡೆದರೆ, ಕೊಯಿರಾಲ ಅವರು 249 ಮತ ಪಡೆದರು. ಒಟ್ಟು 587 ಮಂದಿ ಸಂಸದರು ಮತದಾನ ಮಾಡಿದರು.
ಓಲಿ ಅವರಿಗೆ ಯುಸಿಪಿನ್-ಮಾವೋವಾದಿ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷ-ನೇಪಾಳ, ಮಾದೇಶಿ ಜನಧಿಕಾರ್ ಫೋರಂ-ಡೆಮೋಕ್ರಾಟಿಕ್ ಮತ್ತು ಮತ್ತಿತರ ಪಕ್ಷಗಳು ಬೆಂಬಲ ನೀಡಿದವು.
ದೇಶದಲ್ಲಿ ಜಾರಿಗೆ ಬಂದಿರುವ ನೂತನ ಸಂವಿಧಾನಕ್ಕೆ ಸಂಬಂಧಿಸಿದಂತೆ ಉದ್ಭವವಾಗಿರುವ ಸಂಘರ್ಷಗಳನ್ನು ಹತ್ತಿಕ್ಕುವ ಸಂಬಂಧ ಒಮ್ಮತಕ್ಕೆ ಬರಲು ಕೊಯಿರಾಲ ಸರ್ಕಾರ ವಿಫಲವಾದ ಹಿನ್ನಲೆಯಲ್ಲಿ ಮತದಾನ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.