ಗಾಂಧೀನಗರ: ಗುಜರಾತ್ನ ಬನಸ್ಕಾಂತ ಜಿಲ್ಲೆಯ ಮಸಾಲಿ ಗ್ರಾಮವು ಭಾರತ-ಪಾಕ್ ಗಡಿಯಲ್ಲಿನ ದೇಶದ ಮೊದಲ ‘ಸೋಲಾರ್ ಗ್ರಾಮ’ವಾಗುವ ಮೂಲಕ ಇತಿಹಾಸ ನಿರ್ಮಿಸಿದೆ. ಪಾಕಿಸ್ತಾನದ ಗಡಿಯಿಂದ 40 ಕಿ.ಮೀ ದೂರದಲ್ಲಿರುವ ಈ ಗ್ರಾಮವು ಶೇ.100ರಷ್ಟು ಸೌರ ವಿದ್ಯುತ್ ಉತ್ಪಾದನೆಯನ್ನು ಸಾಧಿಸಿದೆ. 800 ಜನಸಂಖ್ಯೆ ಹೊಂದಿರುವ ಮಸಾಲಿಯು ತನ್ನ ಯಶಸ್ವಿ ಸೌರಶಕ್ತಿ ಕಾರ್ಯಕ್ರಮಕ್ಕಾಗಿ ಈಗ ದೇಶದ ಗಮನ ಸೆಳೆದಿದೆ.
ಗ್ರಾಮದಲ್ಲಿ ಒಟ್ಟು 199 ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, 225.5 ಕಿಲೋವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಅಂದರೆ ಮನೆಗಳ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. 1.16 ಕೋಟಿ ಅಂದಾಜು ವೆಚ್ಚದಲ್ಲಿ ಪೂರ್ಣಗೊಂಡ ಈ ಯೋಜನೆಗೆ ಕಂದಾಯ ಇಲಾಖೆ, ಯುಜಿವಿಸಿಎಲ್, ಬ್ಯಾಂಕ್ ಮತ್ತು ಸೋಲಾರ್ ಕಂಪನಿಯಿಂದ ಬೆಂಬಲ ದೊರೆತಿದೆ.
ಯೋಜನೆಯ ಯಶಸ್ಸಿಗೆ ಮಸಾಲಿ ಗ್ರಾ.ಪಂ.ನ ಸರಪಂಚ್ ಮಗನಿರಾಮ್ ರಾವಲ್ ಹಾಗೂ ಗ್ರಾಮದ ಮುಖಂಡರು ಸಂತಸ ವ್ಯಕ್ತಪಡಿಸಿದರು. ಸೌರಶಕ್ತಿಯಿಂದಾಗಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆಯಾಗಿದೆ ಎಂದರು.
ಇನ್ನು ಮುಂದೆ ಗಡಿಭಾಗದ ಗ್ರಾಮಗಳಲ್ಲಿ 24 ಗಂಟೆ ವಿದ್ಯುತ್ ಪೂರೈಕೆಯಾಗಲಿದೆ. ಈ ಉಪಕ್ರಮವು ಬನಸ್ಕಾಂತ ಜಿಲ್ಲೆಯ 17 ಗ್ರಾಮಗಳನ್ನು-ಸರಧಿ ವಾವ್ ತಾಲೂಕಾದಿಂದ 11 ಮತ್ತು ಸುಗಮ ತಾಲೂಕಿನಿಂದ 6-ಸೌರಶಕ್ತಿ ಚಾಲಿತ ಕೇಂದ್ರಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
In a significant milestone for the PM Surya Ghar Scheme, Masali village in Gujarat's Banaskantha district has become India's first 'solar village' on the border. pic.twitter.com/EKzfKH6NsK
— Harsh Sanghavi (@sanghaviharsh) December 19, 2024
In Gujarat, Masali village in Banaskantha district has become country’s first solar border village. Masali village, with a total population of 800, is located 40 kilometers from the Pakistan border. pic.twitter.com/b5BjU78VAd
— The Gorilla (@iGorilla19) December 19, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.