ಮುಂಬಯಿ: ಪಾಕಿಸ್ಥಾನದ ಮಾಜಿ ಸಚಿವ ಕುರ್ಷಿದ್ ಮೊಹ್ಮದ್ ಕಸುರಿ ಅವರ ಪುಸ್ತಕವನ್ನು ಮುಂಬಯಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿರುವ ಸುಧೀಂದ್ರ ಕುಲಕರ್ಣಿ ಅವರ ಮೇಲೆ ಶಿವಸೇನೆ ಕಾರ್ಯಕರ್ತರು ಕಪ್ಪು ಪೇಯಿಂಟ್ನ್ನು ಎರೆಚಿದ್ದಾರೆ.
೮ರಿಂದ 10 ಶಿವಸೇನಾ ಕಾರ್ಯಕರ್ತರು ನನ್ನ ಮನೆಯ ಹೊರಭಾಗದಲ್ಲಿ ನನ್ನ ಮೇಲೆ ಕಪ್ಪು ಪೇಯಿಂಟ್ ಎರೆಚಿ ದಾಳಿ ಮಾಡಿದ್ದಾರೆ, ನನಗೆ ಅವಹೇಳನಕಾರಿಯಾಗಿ ಬೈದಿದ್ದಾರೆ ಎಂದು ಕುಲಕರ್ಣಿ ಹೇಳಿಕೊಂಡಿದ್ದಾರೆ.
ಕುಸುರಿಯವರ ಪುಸ್ತಕವನ್ನು ಮುಂಬಯಿಯಲ್ಲಿ ಬಿಡುಗಡೆಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಈ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಶಿವಸೇನೆ ಕುಲಕರ್ಣಿ ಅವರಿಗೆ ಎಚ್ಚರಿಕೆ ನೀಡಿತ್ತು. ಆದರೆ ಕುಲಕರ್ಣಿ ಈ ಎಚರಿಕೆಗೆ ಜಗ್ಗದ ಹಿನ್ನಲೆಯಲ್ಲಿ ಅವರ ಮೇಲೆ ದಾಳಿ ಮಾಡಲಾಗಿದೆ.
ಕಸುರಿಯವರ ’ Neither a Hawk, Nor a Dove: An Insider Account of Pakistan’s Foreign Policy”.’ಪುಸ್ತಕವನ್ನು ಬಿಡುಗಡೆ ಮಾಡುವುದಕ್ಕಾಗಿ ನಾನು ಈಗಾಗಲೇ ಮುಂಬಯಿಗೆ ಬಂದಿದ್ದೇನೆ. ಇದಕ್ಕೆ ನಿಷೇಧ ಹೇರುವ ಯಾವುದೇ ಅಧಿಕಾರ ಶಿವಸೇನೆಗೆ ಇಲ್ಲ. ಪುಸ್ತಕ ಬಿಡುಗಡೆಯನ್ನು ರದ್ದುಪಡಿಸುವುದಿಲ್ಲ. ಇದು ನಮ್ಮ ಖಡಕ್ ನಿರ್ಣಯ ಎಂದು ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ತಮ್ಮ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ನೀಡಲು ಮುಂದಾಗಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಕುಲಕರ್ಣಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಬಿಜೆಪಿಯ ಮಾಜಿ ಸಲಹೆಗಾರರಾಗಿರುವ ಸುಧೀಂದ್ರ ಕುಲಕರ್ಣಿಯವರು . ಧಮ್ಕಿ, ಬಂದೂಕಿನಿಂದ ಏನು ಆಗದು, ಮಾತುಕತೆಯಿಂದ ಮಾತ್ರ ಎಲ್ಲವೂ ಸಾಧ್ಯ ಎಂದು ಶಿಸವೇನೆಗೆ ಕಿವಿಮಾತು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.