ಬೆಳ್ತಂಗಡಿ : ಮೂಡಬಿದ್ರೆಯಲ್ಲಿ ಶುಕ್ರವಾರ ನಡೆದ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ಶನಿವಾರ ಮಧ್ಯಾಹನ್ನದ ಬಳಿಕ ಬೆಳ್ತಂಗಡಿ ತಾಲೂಕಿನ ವೇಣೂರು ಹಾಗೂ ನಾರಾವಿಯಲ್ಲಿ ಬಂದ್ ವಾತಾವರಣ ನಿರ್ಮಾಣಗೊಂಡಿತ್ತು.
ಮೂಡಬಿದ್ರೆಯಲ್ಲಿ ಬಂದ್ ಇದ್ದ ಕಾರಣ ವೇಣೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ಗಳು ಇಂದು ಬೆಳಗ್ಗಿನಿಂದಲೇ ಸಂಚಾರ ಮೊಡಕುಗೊಳಿಸಿದ್ದವು. ಇದರಿಂದಾಗಿ ಬೆಳಿಒಗ್ಗೆಯೆ ವೇಣೂರಿನಲ್ಲಿ ಬಂದ್ನ ವಾತಾವರಣ ನಿರ್ಮಾಣಗೊಂಡಿತ್ತು.
ವಿವಿಧ ರೀತಿಯ ವದಂತಿಗಳು ಹರಡುತ್ತಿದ್ದ ಹಿನ್ನಲೆಯಲ್ಲಿ ಕೆಲ ಅಂಗಡಿಗಳು ತಾವಾಗಿಯೇ ಬಾಗಿಲು ಮುಚ್ಚಿದ್ದವು. ಮಧ್ಯಾಹನ್ನದ ಬಳಿಕ ಕೆಲ ಗುಂಪುಗಳು ಬಂದ್ ಮಾಡುವಂತೆ ವಿನಂತಿಸಿದ್ದು ಇಡೀ ಪೇಟೆ ಸಂಪೂಣ್ ಬಂದ್ ಆಗಿದೆ. ರಿಕ್ಷಾ ಚಾಲಕರುಗಳು ವಾಹನಸಂಚಾರ ಸ್ಥಗಿತ ಗೊಳಿಸಿ ಬಂದ್ ಆಚರಿಸಿದರು.
ನಾರಾವಿಯಲ್ಲಿಯೂ ವದಂತಿಗಳ ಹಿನ್ನಲೆಯಲ್ಲಿ ಕೆಲವೊಂದು ಅಂಗಡಿಗಳು ಬಾಗಿಲು ಮುಚ್ಚಿದ್ದವು ಆದರೆ ಬಸ್ ಸಂಚಾರಕ್ಕೆ ಯಾವುದೇ ತೊಡಕಾಗಲಿಲ್ಲ. ವೇಣೂರು ಪೋಲೀಸರು ವೇಣೂರು ನಾರಾವಿ ಪರಿಸರದಲ್ಲಿ ಬಿಗು ಪೋಲೀಸ್ ಬಂದೋಬಸ್ತ್ ಮಾಡಿದ್ದು ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.