ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್ನಲ್ಲಿ ಶೇಕಡಾ 95 ರಷ್ಟು ಗೆಜೆಟೆಡ್ ಅಧಿಕಾರಿಗಳ ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲು ಕೇಂದ್ರವು ತಾತ್ವಿಕವಾಗಿ ಒಪ್ಪಿಗೆ ನೀಡಿದೆ.
“ಲಡಾಖ್ ಜನರಿಗೆ ಇದು ದೊಡ್ಡ ಸುದ್ದಿಯಾಗಿದೆ. ಅವರ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ. 95 ಪ್ರತಿಶತ ಗೆಜೆಟೆಡ್ ಅಧಿಕಾರಿಗಳ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸಮ್ಮತಿಸಿದೆ” ಎಂದು ಲಡಾಖ್ ಸಂಸದ ಹನೀಫಾ ಜಾನ್ ತಿಳಿಸಿದ್ದಾರೆ.
ಅವರ ಪ್ರಕಾರ, ಜನವರಿ 15 ರ ಮುಂದಿನ ಸಭೆಯಲ್ಲಿ ಈ ಮೀಸಲಾಯಿ ಹೇಗೆ ಕಾರ್ಯರೂಪಕ್ಕೆ ಬರಲಿದೆ ಎಂಬುದರ ಕುರಿತು ಸೂಕ್ಷ್ಮವಾದ ವಿವರಗಳನ್ನು ಚರ್ಚಿಸಲಾಗುತ್ತಿದೆ.
“ನಾವು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದೇವೆ. ಯುವಕರು ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಅವರ ಬಳಿ ತೆಗೆದುಕೊಂಡು ಹೋಗಿದ್ದೇವೆ ಮತ್ತು ನಮ್ಮ ಕಾಳಜಿಗಳು ನಿಜವಾಗಿದ್ದು, ಪರಿಹರಿಸಲಾಗುವುದು ಎಂದು ನಮಗೆ ಭರವಸೆ ನೀಡಲಾಗಿದೆ” ಎಂದಿದ್ದಾರೆ.
“ನಾವು ಪ್ರತ್ಯೇಕ ಲೋಕಸೇವಾ ಆಯೋಗವನ್ನು ಪಡೆಯುತ್ತೇವೆಯೇ ಅಥವಾ ಅದನ್ನು ಜಮ್ಮು ಮತ್ತು ಕಾಶ್ಮೀರದೊಂದಿಗೆ ವಿಲೀನಗೊಳಿಸುತ್ತೇವೆಯೇ ಎಂಬ ವಿವರಗಳ ಕುರಿತು ಮುಂದಿನ ಸಭೆಯಲ್ಲಿ ಕೆಲಸ ಮಾಡಲಾಗುವುದು” ಎಂದು ಮಾಜಿ ಬಿಜೆಪಿ ಸಂಸದ ತುಪ್ಸ್ತಾನ್ ಚೆವಾಂಗ್ ತಿಳಿಸಿದ್ದಾರೆ.
“400 ಕ್ಕೂ ಹೆಚ್ಚು ಪೋಸ್ಟ್ಗಳು ಖಾಲಿ ಇವೆ. ಲಡಾಖ್ನ ಜನರು ಮತ್ತು ಇಲ್ಲಿನ ಬುಡಕಟ್ಟು ಜನಾಂಗದವರಿಗೆ ಇದರಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ನಮಗೆ ಭರವಸೆ ನೀಡಲಾಗಿದೆ” ಎಂದು ಚೆವಾಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.