ನವದೆಹಲಿ: ಇಂದು ಭಾರತೀಯ ನೌಕಾಪಡೆ ದಿನ. ಭಾರತ ಜಲ ಗಡಿಯನ್ನು ಅತ್ಯಂತ ಜತನದಿಂದ ಕಾಯುವ ವೀರರನ್ನು ನೆನಪಿಸಿ ಗೌರವ ಸಲ್ಲಿಸಬೇಕಾದ ದಿನ.
140 ಕೋಟಿಗಿಂತಲೂ ಅಧಿಕ ಜನಸಂಖ್ಯೆ ಇರುವ ಭಾರತದ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ನಮ್ಮ ದೇಶಯ ಹೆಮ್ಮೆಯ ರಕ್ಷಣಾ ಪಡೆಗಳು ವಹಿಸಿಕೊಂಡಿವೆ. ಭೂ ಸೇನೆ, ವಾಯು ಸೇನೆ ಮತ್ತು ಜಲ ಸೇನೆಗಳು ಭಾರತದ ನೆಲ, ಪರಂಪರೆ, ಆರ್ಥಿಕತೆ ಎಲ್ಲವನ್ನೂ ರಕ್ಷಿಸುವ ಮಹತ್ತರ ಕಾರ್ಯದಲ್ಲಿ ತೊಡಗಿವೆ. ಹಾಗಾಗಿ ರಕ್ಷಣಾ ಪಡೆಗಳ ಸಾಮರ್ಥ್ಯ, ಕಾರ್ಯವೈಖರಿ, ಪ್ರಾಣತ್ಯಾಗ ಎಲ್ಲವನ್ನೂ ಗೌರವಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆ ಉದ್ದೇಶದಿಂದ ಇಂದು ಅಂದರೆ ಡಿಸೆಂಬರ್ 4 ರಂದು ಪ್ರತೀವರ್ಷ ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುತ್ತದೆ
ಭಾರತದ ಜಲಗಡಿಯಲ್ಲಿ ದೇಶ ಕಾಯುವ ಸೈನಿಕರನ್ನು ನೆನೆಯುವ ಹಾಗೂ ವಿವಿಧ ಕಾರ್ಯಾಚರಣೆಗಳಲ್ಲಿ ವೀರಮರಣ ಹೊಂದಿದ ನೌಕಾಯೋಧರನ್ನು ಸ್ಮರಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶ. 1971ರ ಡಿಸೆಂಬರ್ನಲ್ಲಿ ಕರಾಚಿ ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಯುದ್ಧದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಯುದ್ಧದಲ್ಲಿ `ಆಪರೇಷನ್ ಟ್ರೈಡೆಂಟ್’ ಹೆಸರಿನ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಪಡೆಯ ಯೋಧರು ದೇಶಕ್ಕಾಗಿ ಹೋರಾಡಿದ್ದರು. ಡಿಸೆಂಬರ್ 3 ರಂದು ಪಾಕಿಸ್ತಾನವು ಭಾರತದ ಜಲಗಡಿಗಳಲ್ಲಿ ಆಕ್ರಮಣ ಮಾಡಲು ಆರಂಭಿಸಿತು. ಇದಕ್ಕೆ ಪ್ರತಿಯಾಗಿ ಭಾರತೀಯ ನೌಕಾಪಡೆ ಪಿಎನ್ಎಸ್ ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡುಗುಗಳನ್ನು ಹೊಡೆದುರುಳಿಸಿತ್ತು. ಆದರೆ ದುರಾದೃಷ್ಟವಶಾತ್ ಈ ಕಾರ್ಯಾಚರಣಯಲ್ಲಿ ಭಾರತೀಯ ಅನೇಕ ಯೋಧರು ವೀರಮರಣವನ್ನು ಹೊಂದಿದರು. ಅವರ ಸ್ಮರಣಾರ್ಥವಾಗಿಯೇ ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.
ದೇಶದ ಕರಾವಳಿ ತೀರ, ಸಮುದ್ರ ಗಡಿಯನ್ನು ಶತ್ರು ರಾಷ್ಟ್ರಗಳಿಂದ ರಕ್ಷಣೆ ಮಾಡುವುದರ ಜೊತೆ ಜೊತೆಗೆ ವಿದೇಶಗಳ ಬಂದರು ಭೇಟಿ, ಜಂಟಿ ಕವಾಯತು, ವಿಪತ್ತು ಪರಿಹಾರ ಮುಂತಾದ ಕಾರ್ಯಗಳಲ್ಲಿ ತೊಡಗಿ ಅಂತಾರಾಷ್ಟ್ರೀಯ ಸಂಬಂಧವನ್ನು ಅಭಿವೃದ್ಧಿಪಡಿಸುವ ಕೆಲಸವನ್ನೂ ಭಾರತೀಯ ನೌಕಾಪಡೆ ಮಾಡ್ತದೆ. ರಾಯಲ್ ಇಂಡಿಯನ್ ನೇವಿ ಎಂದು ಕರೆಯುತ್ತಿದ್ದ ಈ ರಕ್ಷಣಾ ಪಡೆಯನ್ನು ಸ್ವಾತಂತ್ರ್ಯ ನಂತರ 1950ರ ಜನವರಿ 26 ರಂದು ಭಾರತೀಯ ನೌಕಾಪಡೆ ಎಂದು ಮರುನಾಮಕರಣ ಮಾಡಲಾಯಿತು.
On Navy Day, we salute the valiant personnel of the Indian Navy who protect our seas with unmatched courage and dedication. Their commitment ensures the safety, security and prosperity of our nation. We also take great pride in India’s rich maritime history. pic.twitter.com/rUrgfqnIWs
— Narendra Modi (@narendramodi) December 4, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.