
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಪ್ರಗತಿ (Pro-Active Governance and Timely Implementation) ಉಪಕ್ರಮ ತಂತ್ರಜ್ಞಾನ ಮತ್ತು ಆಡಳಿತದ ಅದ್ಭುತ ಸಂಯೋಜನೆಯೊಂದಿಗೆ ತ್ವರಿತವಾಗಿ ಮೂಲಸೌಕರ್ಯಗಳ ಅನುಷ್ಠಾನವನ್ನು ಖಾತರಿಪಡಿಸುತ್ತಿದೆ. ಇದೀಗ ಈ ಯೋಜನೆಗೆ ಆಕ್ಸ್ಫರ್ಡ್ನಿಂದಲೂ ಪ್ರಶಂಸೆ ವ್ಯಕ್ತವಾಗಿದೆ.
ಆಕ್ಸ್ಫರ್ಡ್ನ ಸೈಡ್ ಬ್ಯುಸಿನೆಸ್ ಸ್ಕೂಲ್ ಮತ್ತು ಗೇಟ್ಸ್ ಫೌಂಡೇಶನ್ ನಡೆಸಿದ ಅಧ್ಯಯನದಲ್ಲಿ ಪ್ರಗತಿ ಉಪಕ್ರಮದ ಪರಿಣಾಮಕಾರಿತ್ವವನ್ನು ಗುರುತಿಸಿ ಪ್ರಶಂಸಿಸಲಾಗಿದೆ. ಪ್ರಗತಿಯ ಪರಿಣಾಮವಾಗಿ ಮೂಲಸೌಕರ್ಯ ಯೋಜನೆಗಳು ಶೀಘ್ರ ಬೆಳವಣಿಗೆ ಹೊಂದಿದೆ ಎಂದು ಮೋದಿ ಆಡಳಿತವನ್ನು ಶ್ಲಾಘಿಸಿದೆ.
ಪ್ರಗತಿ ಮೂಲಕ 205 ಶತಕೋಟಿ ಡಾಲರ್ ಮೌಲ್ಯದ 340 ಮೂಲ ಸೌಕರ್ಯ ಯೋಜನೆಗಳು ಅನುಷ್ಠಾನಗೊಂಡಿದೆ.
ಒಂಬತ್ತು ವರ್ಷದ ಹಿಂದೆ ಪ್ರಗತಿ ಪ್ಲಾಟ್ಫಾರ್ಮ್ ಆರಂಭವಾದಾಗ, ಮೂಲಸೌಕರ್ಯ ಅಭಿವೃದ್ಧಿಗೊಳಿಸುವ ಬಹಳ ಕಠಿಣ ಸವಾಲುಗಳಿದ್ದವು. 2023ರ ಜೂನ್ನಲ್ಲಿ 17.05 ಲಕ್ಷ ಕೋಟಿ ಮೌಲ್ಯದ 340 ಯೋಜನೆಗಳು ಪ್ರಗತಿ ಪರಾಮರ್ಶೆಗೆ ಒಳಪಟ್ಟಿವೆ. ಖುದ್ದು ಪ್ರಧಾನಿ ಮೋದಿ ಅವರೇ ಈ ಪ್ರಗತಿ ವಿಚಾರದಲ್ಲಿ ಮುತುವರ್ಜಿ ತೋರಿರುವುದು ಈ ಯಶಸ್ಸಿಗೆ ಕಾರಣ ಎಂದು ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್ ಅಧ್ಯಯನ ವರದಿ ಹೇಳಿದೆ.
ಆಕ್ಸ್ಫರ್ಡ್ ಯೂನಿವರ್ಸಿಟಿ ಮತ್ತು ಗೇಟ್ಸ್ ಫೌಂಡೇಶನ್ ಅಧ್ಯಯನ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮೋದಿ ಎಕ್ಸ್ ಪೋಸ್ಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
“ತಂತ್ರಜ್ಞಾನ ಮತ್ತು ಆಡಳಿತದ ಅದ್ಭುತ ಸಂಯೋಜನೆಯನ್ನು ಪಗ್ರತಿ ಪ್ರತಿನಿಧಿಸುತ್ತದೆ, ಅಡೆತಡೆಗಳನ್ನು ತೆಗೆದುಹಾಕುವುದನ್ನು ಖಚಿತಪಡಿಸುತ್ತದೆ ಮತ್ತು ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುತ್ತದೆ. ವರ್ಷಗಳಲ್ಲಿ, ಈ ಉಪಕ್ರಮ ಗಣನೀಯ ಪ್ರಯೋಜನಗಳಿಗೆ ಕಾರಣವಾಗಿವೆ, ಇದು ಜನರಿಗೆ ಹೆಚ್ಚು ಪ್ರಯೋಜನವನ್ನು ನೀಡಿದೆ. ಅಧ್ಯಯನದಲ್ಲಿ ಪ್ರಗತಿಯ ಪರಿಣಾಮಕಾರಿತ್ವವನ್ನು ಗುರುತಿಸಿರುವುದಕ್ಕೆ ನನಗೆ ಸಂತೋಷವಾಗಿದೆ” ಎಂದಿದ್ದಾರೆ.
PRAGATI represents a wonderful amalgamation of technology and governance, ensuring silos are removed and projects are completed on time. Over the years, these sessions have led to substantive benefits, which have greatly benefitted people.
Am glad that the effectiveness of…
— Narendra Modi (@narendramodi) December 2, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


