ಕೋಲ್ಕತ್ತಾ: ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿರುವ ಜೆಎನ್ ರೇ ಆಸ್ಪತ್ರೆ ಶುಕ್ರವಾರ ಬಾಂಗ್ಲಾದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಅನಿರ್ದಿಷ್ಟಾವಧಿಗೆ ನಿಲ್ಲಿಸುವುದಾಗಿ ಘೋಷಿಸಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರ ಮತ್ತು ಬಾಂಗ್ಲಾದೇಶಿ ಪ್ರಜೆಗಳಿಂದ ಭಾರತೀಯ ಧ್ವಜಕ್ಕೆ ಅವಮಾನವಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕೋಲ್ಕತ್ತಾದ ಮಾಣಿಕ್ತಾಲಾ ಪ್ರದೇಶದಲ್ಲಿರುವ ಆಸ್ಪತ್ರೆಯು ಭಾರತಕ್ಕೆ ಮಾಡಲಾಗುತ್ತಿರುವ ಅವಮಾನದ ವಿರುದ್ಧ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದೆ. ಆಸ್ಪತ್ರೆಯ ಅಧಿಕಾರಿ ಸುಭ್ರಾಂಶು ಭಕ್ತ್ ಮಾತನಾಡಿ, “ಇಂದಿನಿಂದ ನಾವು ಯಾವುದೇ ಬಾಂಗ್ಲಾದೇಶದ ರೋಗಿಯನ್ನು ದಾಖಲಿಸುವುದಿಲ್ಲ. ಇದು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮತ್ತು ನಮ್ಮ ತ್ರಿವರ್ಣ ಧ್ವಜಕ್ಕೆ ತೋರಿದ ಅಗೌರವದ ವಿರುದ್ಧದ ಪ್ರತಿಭಟನೆಯಾಗಿದೆ. ಕೋಲ್ಕತ್ತಾದ ಇತರ ಆಸ್ಪತ್ರೆಗಳೂ ಇದನ್ನು ಅನುಸರಿಸಬೇಕು” ಎಂದಿದ್ದಾರೆ.
ಇನ್ನೊಂದೆಡೆ ಬಾಂಗ್ಲಾದೇಶದ ಚಟ್ಟೋಗ್ರಾಮ್ನಲ್ಲಿರುವ ಹಿಂದೂ ದೇವಾಲಯಗಳ ಮೇಲಿನ ಸರಣಿ ದಾಳಿಗಳು ನಡೆದಿದೆ. ಇದು ಭಾರತ-ಬಾಂಗ್ಲಾ ನಡುವಣ ಸಂಬಂಧವನ್ನು ಹಳಸುವಂತೆ ಮಾಡಿದೆ. ಶುಕ್ರವಾರ, ನಗರದ ಹರೀಶ್ ಚಂದ್ರ ಮುನ್ಸೆಫ್ ಲೇನ್ ಪ್ರದೇಶದಲ್ಲಿ ಶಾಂತೇಶ್ವರಿ ಮಾತ್ರಿ ದೇವಸ್ಥಾನ, ಶೋನಿ ದೇವಸ್ಥಾನ ಮತ್ತು ಶಾಂತನೇಶ್ವರಿ ಕಾಲಿಬರಿ ದೇವಸ್ಥಾನವನ್ನು ಗುಂಪೊಂದು ಧ್ವಂಸಗೊಳಿಸಿದೆ.
ಬಾಂಗ್ಲಾದೇಶದ ಸುದ್ದಿ ಪೋರ್ಟಲ್ BDNews24.com ಪ್ರಕಾರ, ದಾಳಿಯು ಮಧ್ಯಾಹ್ನ 2:30 ರ ಸುಮಾರಿಗೆ ಸಂಭವಿಸಿತು, ನೂರಾರು ಜನರ ಗುಂಪು, ಘೋಷಣೆಗಳನ್ನು ಕೂಗುತ್ತಾ, ದೇವಾಲಯಗಳ ಮೇಲೆ ಇಟ್ಟಿಗೆಗಳನ್ನು ಎಸೆದರು. ಕೊತ್ವಾಲಿ ಪೊಲೀಸ್ ಠಾಣೆಯ ಮುಖ್ಯಸ್ಥ ಅಬ್ದುಲ್ ಕರೀಂ ಅವರು ಘಟನೆಯನ್ನು ದೃಢಪಡಿಸಿದ್ದಾರೆ. ದೇಗುಲಕ್ಕೆ ಹಾನಿ ಕಡಿಮೆಯಾದರೂ, ಉದ್ವಿಗ್ನತೆ ಹೆಚ್ಚಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.