ಜಾರ್ಜ್ಟೌನ್: ಜಾಗತಿಕ ಸಮುದಾಯಕ್ಕೆ ಅನನ್ಯ ಸೇವೆ, ದಕ್ಷ ನಾಯಕತ್ವ ಮತ್ತು ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಕೊಡುಗೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ʻದಿ ಆರ್ಡರ್ ಆಫ್ ಎಕ್ಸ್ಲೆನ್ಸ್ʼ ನೀಡಿ ಗೌರವಿಸಲಾಗಿದೆ.
ಜಾರ್ಜ್ಟೌನ್ನಲ್ಲಿ ನಡೆಯುತ್ತಿರುವ ಭಾರತ- ಕೆರಿಕಮ್ (ಕೆರಿಬಿಯನ್ ಕಮ್ಯೂನಿಟಿ) ಶೃಂಗಸಭೆಯ ಸಂದರ್ಭದಲ್ಲಿ ಗಯಾನಾದ ಅಧ್ಯಕ್ಷ ಇರ್ಫಾನ್ ಅಲಿ ಅವರು ಮೋದಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಗಯಾನಾದ ಅಧ್ಯಕ್ಷ ಇರ್ಫಾನ್ ಅಲಿ ಅವರಿಗೆ ಧನ್ಯವಾದ ಅರ್ಪಿಸಿರುವ ಮೋದಿ, “ಇದು 140 ಕೋಟಿ ಭಾರತೀಯರಿಗೆ ದೊರೆಯ ಮನ್ನಣೆ” ಎಂದು ಸಂತೋಷ ವ್ಯಕ್ತಪಡಿಸಿದರು.
ಭಾರತ- ಕೆರಿಕಮ್ ಸಭೆಯಲ್ಲಿ ಮಾತನಾಡಿದ ಮೋದಿ, “ಇರ್ಫಾನ್ ಅಲಿ ಭಾರತದ ಜೊತೆಗೆ ಉತ್ತಮವಾದ ಬಾಂಧವ್ಯವನ್ನು ಕಾಪಾಡಿಕೊಂಡಿದ್ದಾರೆ. ಉಭಯ ದೇಶಗಳ ನಡುವೆ ಅಭಿವೃದ್ಧಿ, ಸಹಕಾರ, ಕೃಷಿ, ಆರೋಗ್ಯ, ಔಷಧ, ಶಿಕ್ಷಣ ಮತ್ತು ಇಂಧನ ವಲಯಗಳಲ್ಲಿನ ಸಹಕಾರದ ಕುರಿತು ಚರ್ಚೆ ನಡೆಸಲಾಗಿದೆ” ಎಂದು ಮೋದಿ ಹೇಳಿದ್ದಾರೆ.
56 ವರ್ಷಗಳ ಬಳಿಕ ಮೊದಲ ಬಾರಿಗೆ ಗಯಾನಾಗೆ ತೆರಳಿದ ಭಾರತೀಯ ಪ್ರಧಾನಿಯೆಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
I am grateful to President Dr. Irfaan Ali, the Government and the people of Guyana for conferring ‘The Order of Excellence.’ This honour belongs to the people of India.
May the India-Guyana friendship grow even stronger in the times to come.@DrMohamedIrfaa1@presidentaligy pic.twitter.com/Tm9OfFxwyo
— Narendra Modi (@narendramodi) November 21, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.